Advertisement

ಜನಕೇಂದ್ರಿತ ತಂತ್ರದಿಂದ ಕೊರೊನಾ ನಿಯಂತ್ರಣ: ಪ್ರಧಾನಿ ಮೋದಿ

09:22 AM May 13, 2022 | Team Udayavani |

ಹೊಸದಿಲ್ಲಿ: “ಕೊರೊನಾ ಸೋಂಕು ವಿಶ್ವದ ಜನಜೀವನಕ್ಕೆ ಅಡ್ಡಿ ಮಾಡು ತ್ತಲೇ ಸಾಗುತ್ತಿದೆ. ಭಾರತದಲ್ಲಿ ಜನಕೇಂದ್ರಿತ ತಂತ್ರ ಬಳಸಿಕೊಂಡು ಸಾಂಕ್ರಾಮಿಕವನ್ನು ನಿಯಂತ್ರ ಣಕ್ಕೆ ತಂದಿದ್ದೇವೆ’ ಎಂದು ಪ್ರಧಾನಿ ಮೋದಿ ಗುರುವಾರ ನಡೆದ 2ನೇ ಜಾಗತಿಕ ಕೊರೊನಾ ಶೃಂಗಸಭೆಯಲ್ಲಿ ತಿಳಿಸಿದ್ದಾರೆ.

Advertisement

“ಭಾರತವು ವಿಶ್ವದಲ್ಲೇ ದೊಡ್ಡ ಲಸಿಕೆ ಅಭಿಯಾನ ನಡೆಸಿದೆ. ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಪೂರಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಂಪ್ರದಾಯಿಕ ಔಷಧಗಳನ್ನು ಬಳಸಿದ್ದೇವೆೆ.  ವಿಶ್ವದಲ್ಲಿ ಹೆಚ್ಚು ಸ್ಥಿತಿಸ್ಥಾಪಕ ಆರೋಗ್ಯ ಭದ್ರತಾ ವ್ಯವಸ್ಥೆ ನಿರ್ಮಾಣವಾಗಬೇಕೆಂದರೆ ಡಬ್ಲ್ಯುಎಚ್‌ಒ ಸುಧಾರಿ ಸಬೇಕು, ಇನ್ನಷ್ಟು ಬಲಿಷ್ಠವಾಗಬೇಕು. ಈ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿಕೊಳ್ಳಲು ಭಾರತ ಸಿದ್ಧವಿದೆ ಎಂದಿದ್ದಾರೆ ಮೋದಿ.

 ಶೇ.100 ಜಾರಿಯಾಗಬೇಕು :

ಗುಜರಾತ್‌ನಲ್ಲಿ 4 ಸರಕಾರಿ ಯೋಜನೆಗಳನ್ನು ಶೇ.100 ವ್ಯಾಪ್ತಿಗೆ ತಲುಪಿಸಿರುವ ಹಿನ್ನೆಲೆ “ಉತ್ಕರ್ಷ್‌ ಸಮಾರೋಹ’ ಕಾರ್ಯಕ್ರಮ ನಡೆಸಲಾಗಿದ್ದು, ಪ್ರಧಾನಿ ಮೋದಿ ಅವರು ಅದರಲ್ಲಿ ವರ್ಚುವಲ್‌ ಆಗಿ ಭಾಗವಹಿಸಿ ಮಾತನಾಡಿದ್ದಾರೆ. ಸರಕಾರದ ಯೋಜನೆಗಳಲ್ಲಿ ಹಲವು ಕೇವಲ ಕಾಗದದಲ್ಲಿ ಉಳಿಯು ತ್ತಿದೆ ಅಥವಾ ಅರ್ಹರಲ್ಲದವರು ಅದರ ಪ್ರಯೋಜನ ಪಡೆಯುತ್ತಿ ದ್ದಾರೆ. ಆದರೆ ಯೋಜನೆಗಳು ಶೇ. 100 ವ್ಯಾಪ್ತಿಗೆ ಸಂಪೂರ್ಣವಾಗಿ ಜಾರಿಗೆ ಬಂದಾಗ ತಾರತಮ್ಯ ಮತ್ತು ತುಷ್ಟೀಕರಣದ ರಾಜಕೀಯ ಕೊನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next