Advertisement
ಸದ್ಯಕ್ಕೆ ಅದಾನಿ ಸಮೂಹಕ್ಕೆ ಹೊಸದಾಗಿ ಸಾಲವಿತರಣೆ ಮಾಡದೇ ಇರಲು ನಿರ್ಧರಿಸಲಾಗಿದೆ. ಈ ಪ್ರಕರಣದ ಮುಂದಿನ ಬೆಳವಣಿಗೆಗಳನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಾಗತಿಕ ಬ್ಯಾಂಕ್ವೊಂದರ ಅಧಿಕಾರಿ ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದರಿಂದಾಗಿ, ಭಾರತ ಮತ್ತು ವಿದೇಶಗಳಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಮುಂದಾಗಿದ್ದ ಅದಾನಿ ಕಂಪೆ ನಿಗೆ ನಿಧಿ ಸಂಗ್ರಹವೇ ದೊಡ್ಡ ಸವಾಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಗೌತಮ್ ಅದಾನಿ ಅವರ ಅದಾನಿ ಗ್ರೀನ್ ಎನರ್ಜಿ ಕಂಪೆನಿಯು ಅಮೆರಿಕದ ಷೇರು ಹೂಡಿಕೆದಾರರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ನಿಯಮ ಉಲ್ಲಂ ಸಿದ್ದು ನಿಜವೇ ಎಂಬ ಕುರಿತು ಭಾರತದ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಸತ್ಯಶೋಧನ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ 2 ವಾರ ತಗಲಲಿದ್ದು, ಆ ಬಳಿಕ ಅಧಿಕೃತ ತನಿಖೆ ಆರಂಭಿಸಬೇಕೇ ಬೇಡವೇ ಎಂದು ಸೆಬಿ ನಿರ್ಧರಿಸಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Related Articles
-ವೈ.ಎಸ್. ಶರ್ಮಿಳಾ,ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ
Advertisement