Advertisement
ದಿನಬಳಕೆಯ ಅಗತ್ಯಗಳಲ್ಲಿ ಒಂದಾಗಿರುವ ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಬೆಲೆಯ ಕಾರಣದಿಂದಾಗಿ ಭಾರತದ ಜನರು ಕಂಗೆಟ್ಟು ಹೋಗಿದ್ದಾರೆ.
Related Articles
Advertisement
20 ತಿಂಗಳ ಅವಧಿಯಲ್ಲಿಯೇ ಗರಿಷ್ಟ ಮಟ್ಟವನ್ನು ತಲುಪಿದ ಬ್ರೆಂಟ್ ಕಚ್ಚಾ ತೈಲ ಬೆಲೆ, ಸೋಮವಾರ(ಮಾ. 8) 70 ಡಾಲರ್ ಪ್ರತಿ ಬ್ಯಾರೆಲ್ ಗೆ ತಲುಪಿತ್ತು. ಇದು ಕಳೆದ 20 ತಿಂಗಳ ಅತ್ಯಂತ ಗರಿಷ್ಟಮಟ್ಟವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಕಳೆದ ಗುರುವಾರ ನಡೆದ OPEC+ ರಾಷ್ಟ್ರಗಳ ನಡುವೆ ನಡೆದ ಸಭೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಉತ್ಪಾದನೆಯನ್ನು ಹೆಚ್ಚಿಸುವ ಪ್ರಸ್ತಾವಕ್ಕೆ ಪೂರಕ ಪ್ರತಿಕ್ರಿಯೆ ಬಂದಿದೆ ಎಂಬ ವರದಿಯಾಗಿದ್ದು, ಈ ಹಿನ್ನಲೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆಯಲ್ಲಿ 6 ಡಾಲರ್ ಹೆಚ್ಚಳವಾಗಿದೆ. ಇದು ತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಪ್ರಭಾವ ಬೀರಲಿದೆ.
ಓದಿ : ತೈಲೋತ್ಪನ್ನವನ್ನು ಹೆಚ್ಚಿಸಿ, ಆರ್ಥಿಕತೆಯ ಚೇತರಿಕೆಗೆ ಸಹಕರಿಸಿ : OPECಗೆ ಭಾರತದ ಮನವಿ
ಇನ್ನು, ಕಳೆದ 9 ದಿನಗಳಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಕಂಡುಬಂದಿಲ್ಲ.
ತೈಲೋತ್ಪಾದನೆಯ ಮೇಲಿನ ನಿಯಂತ್ರಣವನ್ನು ತೆಗೆದು ಹಾಕುವ ಕುರಿತು ಭಾರತ ಮಾಡಿರುವ ಮನವಿಯನ್ನು ಒಪೆಕ್ + ರಾಷ್ಟ್ರಗಳ ಸಭೆ ತಳ್ಳಿ ಹಾಕಿದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತನ್ನ ಎರಡು ವರ್ಷದ ಗರಿಷ್ಟ ಮಟ್ಟಕ್ಕೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಕಚ್ಚಾ ತೈಲೋತ್ಪನ್ನ ರಾಷ್ಟ್ರಗಳು ತಮ್ಮ ತೈಲ ಉತ್ಪಾದನೆಯನ್ನು ಹೆಚ್ಚಿಸದೇ ಹೋದಲ್ಲಿ ಇಂಧನ ಬೆಳೆಗಳು ಮತ್ತಷ್ಟು ಏರಿಕೆಯಾಗಲಿವೆ ಎನ್ನುವುದು ಖಚಿತ.
ಅಷ್ಟೇ ಯಾಕೆ ಪೆಟ್ರೋಲ್ ಡಿಸೇಲ್ ಬೆಲೆ ರೂ. 100ರ ಗಡಿ ದಾಟುವ ಸಾಧ್ಯತೆಯನ್ನು ಕೂಡ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ದೇಶದ ಕೆಲವು ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100ರ ಸನಿಹ ತಲುಪಿದೆ.
ಓದಿ : ಕೋವಿಡ್ ಪರಿಣಾಮ : ದೇಶದಲ್ಲಿ 10,113 ಕಂಪೆನಿಗಳು ಸ್ಥಗಿತ..!