Advertisement

ಟ್ರೋಲರ್‌ಗಳ ವಿರುದ್ಧ ಮ್ಯಾಕ್ಸಿ ಆಕ್ರೋಶ

07:04 PM Oct 12, 2021 | Team Udayavani |

ಶಾರ್ಜಾ: ಐಪಿಎಲ್‌ ಟೂರ್ನಿಯ ಎಲಿಮಿನೇಟರ್‌ ಸುತ್ತಿನಲ್ಲಿ ಆರ್‌ಸಿಬಿ ಸೋತು ನಿರ್ಗಮಿಸಿದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ನಿಂದನೆ ಹರಡುತ್ತಿರುವವರನ್ನು “ಭಯಾನಕ ಜನರು’ ಎಂದು ಕರೆಯುವ ಮೂಲಕ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

“ಐಪಿಎಲ್‌ 14ನೇ ಆವೃತ್ತಿಯು ಆರ್‌ಸಿಬಿಗೆ ಅದ್ಭುತವಾಗಿತ್ತು. ಆದರೆ ನಾವು ಕೊನೆಯ ಹಂತದಲ್ಲಿ ಎಡವಿದೆವು. ಇದರಿಂದ ನಮ್ಮ ಅಮೋಘ ಋತುವನ್ನು ಮರೆಯಲು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಕಸ ಸುರಿಯುತ್ತಿದ್ದಾರೆ. ನಾವು ಕೂಡ ಮನುಷ್ಯರೇ. ನಾವು ಪ್ರತಿದಿನವೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ. ನಿಂದಿಸುವುದನ್ನು ಬಿಟ್ಟು ಯೋಗ್ಯ ವ್ಯಕ್ತಿಯಾಗಿರಲು ಪ್ರಯತ್ನಿಸಿ…’ ಎಂದು ಮ್ಯಾಕ್ಸ್‌ವೆಲ್‌ ಖಾರವಾಗಿ ಹೇಳಿದ್ದಾರೆ.

“ಮೆಚ್ಚುಗೆಯನ್ನು ಹಂಚಿಕೊಂಡ ನಿಜವಾದ ಅಭಿಮಾನಿಗಳಿಗೆ ಧನ್ಯವಾದಗಳು! ದುರದೃಷ್ಟವಶಾತ್‌ ಇಲ್ಲಿ ಕೆಲವು ಜನರು ಸಾಮಾಜಿಕ ಮಾಧ್ಯಮವನ್ನು ಭಯಾನಕ ಸ್ಥಳವನ್ನಾಗಿ ಮಾಡುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ದಯವಿಟ್ಟು ಈ ರೀತಿ ಮಾಡಬೇಡಿ’ ಎಂದು ವಿನಂತಿಸಿದ್ದಾರೆ ಮ್ಯಾಕ್ಸ್‌ವೆಲ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next