Advertisement

ಕೋವಿಡ್‌-19 ಮಣಿಸಲಿದೆಯೇ ಫ್ಯಾಬಿಫ್ಲೂ ಮಾತ್ರೆ

09:43 AM Jun 21, 2020 | sudhir |

ನವದೆಹಲಿ: ಕೋವಿಡ್‌-19 ವಿಶ್ವಕ್ಕೆ ವಕ್ಕರಿಸಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಇಲ್ಲಿಯವರೆಗೂ ಆ ಡೆಡ್ಲಿ ವೈರಸ್‌ಗೆ ನಿಗದಿತ ಲಸಿಕೆ ಎಂಬುದು ಸಿಕ್ಕಿಲ್ಲ. ಈ ನಡುವೆ ಸಾಕಷ್ಟು ದೇಶಗಳ ಸಂಶೋಧಕರ ತಂಡಗಳು ದಿನಕ್ಕೊಂದು ಔಷಧವನ್ನು ಕೋವಿಡ್‌-19 ವಿರುದ್ಧ ಪ್ರಯೋಗಿಸಿ ಸೋಂಕು ವಿರುದ್ಧ ಹೋರಾಡಲು ಈ ಔಷಧ ಸಶಕ್ತ ಎಂಬ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದು, ಇದೀಗ ದೇಶದಲ್ಲೂ ತೀವ್ರವಾಗಿ ಕೋವಿಡ್ ಬಾಧೆಗೆ ಒಳಗಾಗದ ರೋಗಿಗಳ ಚಿಕಿತ್ಸೆಗಾಗಿ ಫ್ಯಾಬಿಫ್ಲೂ ಉಪಯುಕ್ತವಾಗಲಿದೆ ಎಂದು ಹೇಳಲಾಗುತ್ತಿದೆ.

Advertisement

ಮುಂಬಹಿ ಮೂಲದ ಗ್ಲೆನ್ಮಾರ್ಕ್‌ ಫಾರ್ಮಾಸ್ಯುಟಿಕಲ್ಸ್ ಔಷಧ ಸಂಸ್ಥೆಯು ಈ ಕುರಿತು ಶುಕ್ರವಾರ ಡ್ರಗ್ಸ್ ಕಂಟ್ರೋಲರ್‌ಜನರಲ್‌ ಆಫ್‌ ಇಂಡಿಯಾ (ಡಿಸಿಜಿಐ)ದಿಂದ ಉತ್ಪಾದನೆ ಮತ್ತು ಮಾರುಕಟ್ಟೆ ಅನುಮೋದನೆ ಪಡೆದಿದ್ದು, ಫ್ಯಾಬಿಫ್ಲೂ ಎಂಬ ಬ್ರಾಂಡ್‌ ಹೆಸರಿನಲ್ಲಿ ಆಂಟಿವೈರಲ್‌ ಫಾವಿಪಿರವಿರ್‌ ಔಷಧಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಗ್ಲೆನ್ಮಾರ್ಕ್‌ ಫಾರ್ಮಾಸ್ಯುಟಿಕಲ್ಸ್ ತಿಳಿಸಿದೆ.

ಫ್ಯಾಬಿಫ್ಲೂವಿ ಕೋವಿಡ್‌-19 ಚಿಕಿತ್ಸೆಗಾಗಿ ಅನುಮೋದಿತಗೊಂಡ ಮೊದಲ ಔಷಧವಾಗಿದೆ ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಫ್ಯಾಬಿಫ್ಲೂನಂತಹ ಪರಿಣಾಮಕಾರಿ ಚಿಕಿತ್ಸೆಯ ಲಭ್ಯತೆಯು ದೇಶದಲ್ಲಿನ ರೋಗಿಗಳಿಗೆ ಹೆಚ್ಚು ಅಗತ್ಯವಿರುವ ಮತ್ತು ಸಮಯೋಚಿತ ಚಿಕಿತ್ಸೆಯ ಆಯ್ಕೆ ನೀಡುತ್ತದೆ ಎಂದು ಕಂಪನಿ ಆಶಿಸಿದೆ.

ಕ್ಲಿನಿಕಲ್‌ ಪ್ರಯೋಗಗಳ ಸಮಯದಲ್ಲಿ ಫ್ಯಾಬಿಫ್ಲೂ ಮಧ್ಯಮ ಬಾಧಿತ ಕೋವಿಡ್‌-19 ರೋಗಿಗಳಿಗೆ ಪರಿಣಾಮಕಾರಿಯಾಗಿದೆ ಎಂದು ಗ್ಲೆನ್ಮಾರ್ಕ್‌ ಫಾರ್ಮಾಸ್ಯುಟಿಕಲ್ಸ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಗ್ಲೆನ್‌ ಸಲ್ದಾನಾ ಹೇಳಿದರು.
ಇನ್ನು ಈ ಔಷಧವನ್ನು ದೇಶಾದ್ಯಂತದ ರೋಗಿಗಳಿಗೆ ತ್ವರಿತವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಗ್ಲೆನ್‌ಮಾರ್ಕ್‌ ಸರಕಾರ ಮತ್ತು ವೈದ್ಯಕೀಯ ಸಮುದಾಯದೊಂದಿಗೆ ನಿಕಟವಾಗಿ ಚರ್ಚಿಸಿ ಯೋಜನೆ ರೂಪಿಸಲಿದ್ದೇವೆ ಎಂದು ಸಲ್ದಾನಾ ತಿಳಿಸಿದ್ದಾರೆ.

ದರವೆಷ್ಟು ?
ಪ್ರಿಸ್ಕ್ರಿಪ್‌ಷನ್‌ ಆಧಾರಿತ ಔಷಧಿಯಾಗಿ ಫ್ಯಾಬಿಫ್ಲೂ ಲಭ್ಯವಾಗಲಿದ್ದು, ಈ ಮಾತ್ರೆ ಒಂದಕ್ಕೆ 103 ರೂ. ದರ ನಿಗದಿ ಮಾಡಲಾಗಿದೆ. 1,800 ಮಿ. ಗ್ರಾಂ ದಿನಕ್ಕೆ ಎರಡು ಬಾರಿಯಂತೆ 14 ದಿನದವರೆಗೆ ತೆಗೆದುಕೊಳ್ಳಬೇಕೆಂದು ಶಿಫಾರಸು ಮಾಡಲಾಗಿದ್ದು, ಇದು ನಾಲ್ಕು ದಿನಗಳಲ್ಲಿ ವೈರಲ್‌ ಲೋಡ್‌ ಶೀಘ್ರವಾಗಿ ಕಡಿಮೆ ಮಾಡುತ್ತದೆ ಮತ್ತು ವೇಗವಾಗಿ ರೋಗಲಕ್ಷಣ ಕಡಿಮೆ ಮಾಡುತ್ತದೆ. ಫಾವಿಪಿರವಿರ್‌ಶೇ.88ರಷ್ಟು ವೈದ್ಯಕೀಯ ಸುಧಾರಣೆ ತೋರಿಸಿದೆ ಎಂದು ಔಷಧಿ ತಯಾರಕರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next