Advertisement
ಚಮೋಲಿಯ ದುರ್ಘಟನೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಂತಾಪ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕಷ್ಟದ ಸಂದರ್ಭದಲ್ಲಿ ಭಾರತದೊಂದಿಗೆ ಬೆನ್ನೆಲುಬಾಗಿ ನಾವು ನಿಲ್ಲುತ್ತೇವೆ ಎಂದು ವಿಶ್ವ ನಾಯಕರು ಹೇಳಿಕೊಂಡಿದ್ದಾರೆ.
Related Articles
Advertisement
“ಉತ್ತರಾಖಂಡದ ಅವಘಡ 100ಕ್ಕೂ ಹೆಚ್ಚು ಜನರ ನಾಪತ್ತೆಗೆ ಕಾರಣವಾಗಿದೆ. ಕೆಲವರು ಮೃತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡವರಿಗೆ ಸಾಂತ್ವಾನ ಹೇಳುತ್ತೇವೆ. ಹಾಗೂ ನಮ್ಮ ಪೂರ್ಣ ಬೆಂಬಲ ಭಾರತದೊಂದಿಗೆ ಇದೆ” ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಟ್ವೀಟ್ ಮಾಡಿದ್ದಾರೆ.
ಓದಿ: ತಪ್ಪು ಮಾಹಿತಿ ಹರಡುತ್ತಿರುವ ಖಲಿಸ್ತಾನಿ ಖಾತೆಗಳನ್ನು ತೆಗೆಯಿರಿ : ಟ್ವೀಟರ್ ಗೆ ಕೇಂದ್ರ ಮನವಿ
ಇನ್ನು, “ಉತ್ತರಾಖಂಡದಲ್ಲಿ ಸಂಭವಿಸಿದ ಘಟನೆ ವಿಷಾದನೀಯ. ಮೃತರ ಕುಟುಂಬದ ಸದಸ್ಯರಿಗೆ ನಾವು ಸಂತಾಪ ಸೂಚಿಸುತ್ತೇವೆ ಮತ್ತು ಅವರ ಭವಿಷ್ಯಕ್ಕೆ ಪ್ರಾರ್ಥಿಸುತ್ತೇವೆ.” ಎಂದು ನೇಪಾಳದ ವಿದೇಶಿ ವ್ಯವಹಾರಗಳ ಸಚಿವಾಲಯ ಸಂತಾಪ ವ್ಯಕ್ತಪಡಿಸಿದೆ.
“ಚಮೋಲಿಯ ಭಾರಿ ಹಿಮ ಸ್ಫೋಟದಲ್ಲಿ ಮೃತರಾದ ಮತ್ತು ನಾಪತ್ತೆಯಾದವರ ಬಗ್ಗೆ ತುಂಬಾ ದುಃಖವಾಗಿದೆ. ಉತ್ತರಾಖಂಡ ಈ ಆಘಾತದಿಂದ ಆದಷ್ಟು ಬೇಗ ಮುಕ್ತವಾಗಲಿ” ಎಂದು ಅಮೇರಿಕಾದ ವಿದೇಶಾಂಗ ಸಚಿವಾಲಯ ಹೇಳಿದೆ.
“ಉತ್ತರಾಖಂಡದ ಘಟನೆ ನಿಜಕ್ಕೂ ಭಾರಿ ಆಘಾತ ಉಂಟು ಮಾಡಿದೆ. ಈ ಕಷ್ಟದ ಸಂದರ್ಭದಲ್ಲಿ ಆಸ್ಟ್ರೇಲಿಯಾ ತನ್ನ ಆಪ್ತ ಬಂಧುವಿಗೆ (ಭಾರತಕ್ಕೆ) ಆದ ದುಃಖಕ್ಕೆ ಸ್ಪಂದಿಸಲಿದೆ” ಎಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಟ್ವೀಟ್ ಮಾಡಿದ್ದಾರೆ.
ಸದ್ಯ, ಐಟಿಬಿಪಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಚರಣೆಯನ್ನು ಮುಂದುವರಿಸಿದೆ. ನ್ಯಾಶನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್(ಎನ್ ಟಿ ಪಿ ಸಿ) ಸೈಟ್ ತಪೋವನ್ ಬಳಿ ಒಂಬತ್ತು ಮೃತ ದೇಹಗಳು ಪತ್ತೆಯಾಗಿವೆ ಎಂದು , ಐಟಿಬಿಪಿಯ ಮಹಾ ನಿರ್ದೇಶಕ ಎಸ್ ಎಸ್ ದೇಶ್ವಾಲ್ ಮಾಹಿತಿ ನೀಡಿದ್ದಾರೆ.
ಓದಿ: ಉತ್ತರಾಖಂಡ್ ಹಿಮ ದುರಂತ: ರಕ್ಷಣಾ ಕಾರ್ಯಕ್ಕೆ ಪಂದ್ಯದ ಸಂಭಾವನೆ ನೀಡಲಿರುವ ರಿಷಭ್ ಪಂತ್