Advertisement

ಉತ್ತರಾಖಂಡದಲ್ಲಿ ಹಿಮನದಿ ಒಡೆದು ಪ್ರವಾಹ ಸೃಷ್ಟಿ : ಹಲವರು ನಾಪತ್ತೆ

03:04 PM Feb 07, 2021 | Team Udayavani |

ಚಮೋಲಿ :  ನಂದದೇವಿ ಹಿಮನದಿ ಸಿಡಿದ ಕಾರಣದಿಂದಾಗಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಏರಿದ ಪರಿಣಾಮವಾಗಿ ಉತ್ತರಾಖಂಡದ ಚಮೋಲಿ ಜಿಲ್ಲೆಯ ಪವರ್ ಪ್ರಾಜೆಕ್ಟ್ ಬಳಿಯ ಧೌಲಿಗಂಗದಲ್ಲಿ ಭಾರಿ ಪ್ರವಾಹ ಸೃಷ್ಟಿಯಾಗಿದೆ.

Advertisement

ಓದಿ : ಗೇರು ಕೃಷಿಯಲ್ಲಿ ಕಂಡುಬರುವಂತಹ ಚಹಾ ಸೊಳ್ಳೆ ರೋಗದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ,

ಚಮೋಲಿಯ  ತಪೋವನ್ ಪ್ರದೇಶದ ರೈನಿ ಗ್ರಾಮದ ಹಿಮನದಿಯ ಒಡೆದಿದ್ದು, ಜಲಾಶಯಗಳು ತುಂಬಿ ಹರಿದಿವೆ. ಪ್ರವಾಹದ ಕಾರಣದಿಂದ ಹಲವು ಆಸ್ತಿ ಪಾಸ್ತಿಗಳಿಗೆ ನಷ್ಟವುಂಟಾಗಿದ್ದು, ಹಲವರು ನೀರು ಪಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಹಲವರ ಪ್ರಾಣಹಾನಿಯಾಗಿರುವ ಸಾದ್ಯತೆ ಕೂಡ ಇದೆ ಎಂದು  ಎಎನ್‌ಐ ವರದಿ ತಿಳಿಸಿದೆ.

ಈಗಾಗಲೇ ರಕ್ಷಣಾ ತಂಡ ಸ್ಥಳಕ್ಕೆ ತಲುಪಿದ್ದು, ಅವಾಂತರ ಸೃಷ್ಟಿಯಾದ ಭಾಗದಿಂದ ಜನರ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ನೂರಾರು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯನ್ನು ಕೂಡ ಸ್ಥಳಕ್ಕೆ ಕರೆತರಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಏತನ್ಮಧ್ಯೆ, ಧೌಲಿಗಂಗಾ ನದಿಯ ದಂಡೆಯಲ್ಲಿರುವ ಹಳ್ಳಿಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವಂತೆ ಚಮೋಲಿ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯ, ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಘಟನೆಯ ಬಗ್ಗೆ ಪರಿಶೀಲಿಸಿದ್ದಾರೆ.

ಓದಿ : ಬೆಟ್ಟದಲ್ಲಿ  ಬೆಂಕಿ : ಚಿರತೆಗೆ ಹೆದರಿ ಜಾಗರಣೆ

ಇನ್ನು, ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ, ಪೊಲೀಸ್ ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.   ಯಾವುದೇ ರೀತಿಯ ವದಂತಿಗಳಿಗೆ ಜನರು ಗಮನ ಹರಿಸಬೇಡಿ ಎಂದು ಮುಖ್ಯಮಂತ್ರಿ ಮನವಿ ಮಾಡಿದರು, ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಕಾನಂದ ಸಮೀಪವಿರುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಮತ್ತು ಮುಂಜಾಗ್ರತಾ ಕ್ರಮವಾಗಿ ಭಾಗೀರಥಿ ನದಿಯ ಹರಿವನ್ನು ನಿಲ್ಲಿಸಲಾಗಿದೆ ಎಂದು ರಾವತ್ ಮಾಹಿತಿ ನೀಡಿದ್ದಾರೆ.

ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿರುವವರಿಗೆ ಸಿಎಂ ರಾವತ್ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದ್ದಾರೆ. “ನೀವು ಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ ದಯವಿಟ್ಟು 1070, 1905 ಅಥವಾ  9557444486 ಗೆ ಕರೆ ಮಾಡಿ. ಘಟನೆಯ ಬಗ್ಗೆ ಹಳೆಯ ವೀಡಿಯೊಗಳ ವದಂತಿಗಳನ್ನು ಹರಡಬೇಡಿ” ಎಂದು ಮುಖ್ಯಮಂತ್ರಿ ರಾವತ್ ತಿಳಿಸಿದ್ದಾರೆ.

ಓದಿ : ಅಶ್ಲೀಲ ವೀಡಿಯೋ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಮುಂಬಯಿ ನಟಿ ಬಂಧನ..!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next