ಬೆಂಗಳೂರು: ಮಹಿಳೆ ಯರ ಬಗ್ಗೆ ಕನಿಕರ ಬೇಕಿಲ್ಲ, ಅವರ ಧ್ವನಿಗೆ ಶಕ್ತಿ, ಬೆಲೆ ಹಾಗೂ ಗೌರವ ನೀಡಿದರೆ ಸಾಕು. ಶಿಕ್ಷಣ ಹಾಗೂ ಉದ್ಯೋಗದ ದೊರೆತಾಗ ಆಕೆ ಒಂಟಿ ಯಾಗಿ ಬದುಕಲು ಹಾಗೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಹೇಳಿದರು.
ಬಿಲ್ಲವರ ಅಸೋಸಿಯೇಶನ್ ಬೆಂಗಳೂರು ಸಹಯೋಗದಲ್ಲಿ ಬನ್ನೇರುಘಟ್ಟದ ಬಿಲ್ಲವ ಭವನದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜಾ- ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಮನೆಯಲ್ಲಿ, ಸಂಘ- ಸಂಸ್ಥೆಗಳಲ್ಲಿ ನಿರ್ಧಾರ ತೆಗೆದು ಕೊಳ್ಳುವ ಅವಕಾಶ ನೀಡಬೇಕು. ಅವರು ಯಾವುದೇ ಒಂದು ನಿರ್ಧಾರ ವನ್ನು ಹೃದಯದಿಂದ ತೆಗೆದುಕೊಳ್ಳು ತ್ತಾರೆ. ಮಕ್ಕಳನ್ನು ಲಿಂಗಭೇದವಿಲ್ಲದೆ ಬೆಳೆಸುತ್ತಾರೆ ಎಂದು ಹೇಳಿದರು.
ವಿ.ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಸಂಘದ ಅಧ್ಯಕ್ಷ ಎಂ.ವೇದಕುಮಾರ್, ಮಹಿಳಾ ಘಟಕಾಧ್ಯಕ್ಷೆ ಜಲಜಾ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.