Advertisement

ಪಿಎಸ್ಐ ಅಕ್ರಮದಲ್ಲಿ ಅಶ್ವಥನಾರಾಯಣ್ ಭಾಗಿಯಾಗಿದ್ದರೆ ಸಾಕ್ಷಿ ಕೊಡಿ: ಸಚಿವ ಗೋಪಾಲಯ್ಯ ಸವಾಲು

12:06 PM May 06, 2022 | Team Udayavani |

ಬೆಂಗಳೂರು: ಪಿಎಸ್ ಐ ನೇಮಕಾತಿ ಅವ್ಯವಹಾರದಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವಥ್ ನಾರಾಯಣ ಮತ್ತು ಅವರ ಸಂಬಂಧಿ ಭಾಗಿಯಾಗಿರುವ ಕುರಿತು ಸಾಕ್ಷಿಗಳನ್ನು ಒದಗಿಸಲಿ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ವಿರೋಧ ಪಕ್ಷಗಳ ನಾಯಕರನ್ನು ಸವಾಲು ಹಾಕಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ವಥ್ ನಾರಾಯಣ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದೇ ಕೆಲವರು ಮಾಡಿರುವ ಪಿತೂರಿಯಿದು. ಪುರಾವೆಗಳು ಇದ್ದರೆ ಅವರು ನ್ಯಾಯಾಲಯಕ್ಕೆ ಹೋಗಲಿ ಎಂದರು.

ಇದನ್ನೂ ಓದಿ:ಕೇಜ್ರಿವಾಲ್ ಗೆ ಬೆದರಿಕೆ; ಬಿಜೆಪಿ ನಾಯಕ ತೇಜಿಂದರ್ ಪಾಲ್ ಬಗ್ಗಾ ಬಂಧನ

ಈ‌ ಹಿಂದಿನ ಸರ್ಕಾರದಲ್ಲಿ ಇದೇ ರೀತಿ ನಡೆದಿರುವ ನೇಮಕಾತಿ ಅಕ್ರಮಗಳ ಬಗ್ಗೆಯೂ ತನಿಖೆಯಾಗಬೇಕು. ಈಗಾಗಲೇ ಬಂಧಿತನಾಗಿರುವ ತುಮಕೂರು ಯುವಕ ಮತ್ತು ಆತನ ಸಹೋದರ ನಾವು ಅಶ್ವಥ್ ನಾರಾಯಣ್ ಅವರ‌ನ್ನು ನೋಡಿಯೇ ಇಲ್ಲ ಎನ್ನುತ್ತಿದ್ದಾರೆ. ಆದರೆ ವಿರೋಧ ಪಕ್ಷಗಳ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅಶ್ವಥ್ ನಾರಾಯಣ ಅವರು ಭಾಗಿಯಾಗಿರುವ ಕುರಿತು ಸಾಕ್ಷಿ ಇದ್ದರೆ ನೀಡಲಿ ಎಂದು ಒತ್ತಾಯಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next