Advertisement

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ: ಶಾಸಕ

05:54 PM Jul 12, 2022 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬರಗಿ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಆಯ್ದ ಭಾಗಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎಸ್‌. ನಿರಂಜನಕುಮಾರ್‌ ಭೂಮಿಪೂಜೆ ನೆರವೇರಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎಸ್‌. ನಿರಂಜನಕುಮಾರ್‌, ಪಂಚಾಯತ್‌ ರಾಜ್‌ ಇಲಾಖೆಯಿಂದ ಲೆಕ್ಕ ಶೀರ್ಷಿಕೆ 50-54 ಯೋಜನೆಯಲ್ಲಿಬರಗಿ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಗುತ್ತಿಗೆದಾರರು ಗುಣಮಟ್ಟದಿಂದ ಕಾಮಗಾರಿ ಯನ್ನುನೆರವೇರಿಸಬೇಕು. ಲೋಪ ಕಂಡು ಬಂದರೆ ಕೂಡಲೇ ಅದನ್ನು ಸರಿಪಡಿಸಲು ಸ್ಥಳೀಯರು ತಿಳಿಸಿ ಉತ್ತಮ ರಸ್ತೆ ಮಾಡಿಸಿಕೊಳ್ಳಬೇಕು ಎಂದರು.

ಈಗಾಗಲೇ ತಾಲೂಕಿಗೆ ಸುಮಾರು 50 ಕೋಟಿಗಿಂತಲೂ ಹೆಚ್ಚಿನ ವಿಶೇಷ ಅನುದಾನ ತಂದು ಎಸ್ಸಿ, ಎಸ್ಟಿ ಸಮುದಾಯದ ಬೀದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಅಭಿವೃದ್ಧಿ ಪಡಿಸಲಾಗಿದೆ. ಅಂತೆಯೇ ಸಾಮಾನ್ಯ ಜನರ ಬೀದಿಗಳಲ್ಲಿ ರಸ್ತೆ ನಿರ್ಮಾಣಕ್ಕೆ ಬಿ.ಎಸ್‌ .ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಮನವಿ ಮಾಡಿದ ಹಿನ್ನೆಲೆ 22 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದರು. ಅದರಲ್ಲಿ ತಾಲೂಕಿನ 60 ಗ್ರಾಮಗಳ ಸಾಮಾನ್ಯ ಬೀದಿಗಳಿಗೆ ಆಯ್ಕೆ ಮಾಡಿ 50ಲಕ್ಷ ಹಣ ಮಂಜೂರು ಮಾಡಲಾಗಿತ್ತು. ಅದರಂತೆಇದೀಗ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮಂಡಲ ಅಧ್ಯಕ್ಷ ದೊಡ್ಡಹುಂಡಿ ಜಗದೀಶ್‌, ಬಿಜೆಪಿ ಮುಖಂಡರಾದ ಕನ್ನೇಗಾಲ ಸ್ವಾಮಿ, ಸುಜೇಂದ್ರ, ಮಂಚಹಳ್ಳಿ ಬಾಬು, ಅಲತ್ತೂರು ರಾಜೇಶ್‌, ಮಾಡ್ರಹಳ್ಳಿ ನಾಗೇಂದ್ರ, ಮಿಂಚು ಮಹಾದೇವಪ್ಪ,ಚೆನ್ನಂಜಯ್ಯನಹುಂಡಿ ಬಸವಣ್ಣ, ಮಹದೇವಪ್ರಸಾದ್‌,ಮಲ್ಲಿಕಾರ್ಜುನ ಸ್ವಾಮಿ, ಪಂಚಾಯತ್‌ ರಾಜ್‌ ಇಲಾಖೆ ಎಇಇ ಸಂತೋಷ್‌ ಕುಮಾರ್‌ ಸೇರಿದಂತೆ ಸ್ಥಳೀಯ ಮುಖಂಡರು, ಬಿಜೆಪಿ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next