Advertisement

“ಇನ್ನಷ್ಟು ಜನಸೇವೆಗೆ ಅವಕಾಶ ನೀಡಿ’

06:50 AM May 01, 2018 | Team Udayavani |

ಉಪ್ಪುಂದ: ಬೈಂದೂರು ತಾ|, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಗ್ರಾಮಗಳಿಗೆ ರಸ್ತೆ ಸೇರಿದಂತೆ ಹಲವು ಸೌಕರ್ಯಗಳು ಬೈಂದೂರು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಪ್ರಗತಿಗಾಗಿ ಕಳೆದ ಐದು ವರ್ಷದಲ್ಲಿ  ಶ್ರಮಿಸಿದ್ದು ಇನ್ನಷ್ಟು ಜನಸೇವೆ ಮಾಡಲು ಅವಕಾಶ ನೀಡಿ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಹೇಳಿದರು. 

Advertisement

ಅವರು  ಬಿಜೂರು, ಕೆರ್ಗಾಲ್‌, ನಂದನವನ ಮೊದಲಾದೆಡೆ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ ಬೈಂದೂರು ಕ್ಷೇತ್ರದ ಅಭಿವೃದ್ಧಿಯ ಜತೆಗೆ ರಾಜ್ಯ ಸರಕಾರ ಹು¾ಕೊಂಡ ಹತ್ತಾರು ಜನಪ್ರಿಯ ಯೋಜನೆಗಳು, ರೈತರ ಸಾಲ ಮನ್ನಾ ಸೇರಿದಂತೆ ಹಲವು ಸೌಲಭ್ಯಗಳು ಜನಸಾಮಾನ್ಯರಿಗೆ ಹೆಚ್ಚು ತಲುಪಿದೆ ಎಂದರು.

ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮದನಕುಮಾರ್‌ ಉಪ್ಪುಂದ, ಜಿಲ್ಲಾ ಪಂಚಾಯತ್‌ ಸದಸ್ಯೆ ಗೌರಿ ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್‌. ರಾಜು ಪೂಜಾರಿ, ತಾಲೂಕು ಪಂಚಾಯತ್‌ ಸದಸ್ಯೆ ಜಗದೀಶ ದೇವಾಡಿಗ, ಮುಖಂಡರುಗಳಾದ ರಘುರಾಮ ಶೆಟ್ಟಿ, ಗೋಕುಲ್‌ ಶೆಟ್ಟಿ, ಮೋಹನ್‌ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next