ಸಿಂಧನೂರು: ಬಸವಣ್ಣ ಕಾಯಕವೇ ಕೈಲಾಸ ಎಂದಿದ್ದಾರೆ. ದೇಶದ ಎಲ್ಲ ಯುವಕರು ಬಸವಣ್ಣನ ಸಿದ್ಧಾಂತ ಒಪ್ಪುತ್ತಾರೆ. ದೇಶದ ಪ್ರತಿ ಯುವಕ ಉದ್ಯೋಗ ಮಾಡಲು ಉತ್ಸುಕನಾಗಿದ್ದಾನೆ. ಯುವಕರಿಗೆ ಯಾವುದೇ ಪುಗಸಟ್ಟೆ ಬಹುಮಾನ ಬೇಕಿಲ್ಲ. ಉದ್ಯೋಗಾವಕಾಶ ಬೇಕು. ಮೋದಿಜಿ ಯುವಕರಿಗೆ ಯಾವಾಗ ಉದ್ಯೋಗ ಕೊಡ್ತಿರಿ ಹೇಳಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದರು.
ರವಿವಾರ ಸಂಜೆ ನಗರಕ್ಕೆ ರವಿವಾರ ಸಂಜೆ ಆಗಮಿಸಿದ ಜನಾಶೀರ್ವಾದ ಯಾತ್ರೆ ಗಾಂಧಿ ವೃತ್ತದಲ್ಲಿ ಆಯೋಜಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಿ ಹೋದ್ರೂ ಮೇಡ್ ಇನ್ ಚೈನಾ ಕಾಣುತ್ತಿದೆ. ವಾಚ್, ಮೊಬೈಲ್ ಏನೇ ಖರೀದಿಸಿದ್ರೂ ಮೇಡ್ ಇನ್ ಚೈನಾದ್ದೇ 24 ಗಂಟೆಯಲ್ಲಿ ಚೈನಾ 50 ಸಾವಿರ ಉದ್ಯೋಗ ಸೃಷ್ಟಿಸಿದರೆ, ನಮ್ಮ ದೇಶ ಕೇವಲ 450 ಉದ್ಯೋಗ ಸೃಷ್ಟಿಸುತ್ತಿದೆ ಎಂದರು.
ಪ್ರಧಾನಿ ಮೋದಿಜಿ ಕೇವಲ ಕಾಂಗ್ರೆಸ್ ಬಗ್ಗೆ, ಗಾಂಧಿ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದ ಯುವಕರು ಉದ್ಯೋಗ ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಇನ್ನುಳಿದ ಒಂದು ವರ್ಷದ ಅವಧಿಯಲ್ಲಿಯಾದರೂ ಉತ್ತಮ ಕಾರ್ಯ ಮಾಡಲಿ. ಬಸವಣ್ಣನವರ ಕಾಯಕವೇ ಕೈಲಾಸ ಪರಿಕಲ್ಪನೆ ಮೈಗೂಡಿಸಿಕೊಳ್ಳಲಿ ಎಂದು ಸಲಹೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ಸರ್ಕಾರ ಐದು ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದರು.
ರಾಹುಲ್ ಬಸ್‌ಗೆ ಅಡ್ಡಿ: ಸಿಂಧನೂರಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂಚರಿಸುತ್ತಿದ್ದ ಬಸ್‌ಗೆ ರೈತರು ಅಡ್ಡ ಬಂದ ಮತ್ತು ಸದಾಶಿವ ವರದಿ ಅಂಗೀಕಾರಕ್ಕೆ ಆಗ್ರಹಿಸಿ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಗೊರೇಬಾಳ ಬಳಿ 15 ಜನ ರೈತರು ಅಡ್ಡ ಬಂದು ಬಸ್ ತಡೆ ಹಿಡಿದ ಘಟನೆ ನಡೆಯಿತು. ಬಳಿಕ ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದ ಬಳಿಕ ಬಸ್ ಮುಂದೆ ಸಾಗಿತು.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಸ್ವಾಗತಿಸಿದರು. ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಸದಸ್ಯ ಕೆ.ಎಚ್. ಮುನಿಯಪ್ಪ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಸಚಿವ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಂ. ರೇವಣ್ಣ, ಶಾಸಕರಾದ ಹಂಪನಗೌಡ ಬಾದರ್ಲಿ, ಎನ್.ಎಸ್. ಬೋಸರಾಜ್, ಎಸ್.ಆರ್. ಪಾಟೀಲ್, ಸೇರಿದಂತೆ ಅನೇಕರು
ವೇದಿಕೆಯಲ್ಲಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.
ಪ್ರಧಾನಿ ಮೋದಿ ಅವರು ಹೋದಲ್ಲೆಲ್ಲ 35 ವರ್ಷದ ಹಿಂದಿನ ವಿಷಯ ಹೇಳುವುದನ್ನು ಬಿಟ್ಟು ಮುಂದೆ ನೋಡುವ ಜವಾಬ್ದಾರಿ ತೋರಬೇಕು. ಭೂತ ಕಾಲ ಮುಖ್ಯವಲ್ಲ, ಭವಿಷ್ಯ ನೋಡಬೇಕು. ವಿಕೆಟ್ ಕೀಪರ್‌ನನ್ನು ನೋಡಿ ಬ್ಯಾಟಿಂಗ್ ಮಾಡಿದ್ರೆ ಔಟ್ ಆಗ್ತಾರೆ.
ರಾಹುಲ್ ಗಾಂಧಿ ಎಐಸಿಸಿ ಅಧ್ಯಕ