ಕೋಲಾರ: ಕಾಂಗ್ರೆಸ್ ಪಕ್ಷವು ಹಿಂದಿ ನಿಂತಲೂ ಪಾಲಿಸಿಕೊಂಡು ಬಂದಂತೆ ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಒಂದಾದರೂ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು, ಅದರಲ್ಲೂ ಜಿಲ್ಲಾ ಕೇಂದ್ರ ಕೋಲಾರದಲ್ಲಿ ಸ್ಥಳೀಯ ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂದು ಕಾಂಗ್ರೆಸ್ ಮುಖಂಡ ಸುಹೇಲ್ ದಿಲ್‌ನವಾಜ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಪರಂಪರೆ ಕುರಿತಂತೆ ಯಾವುದೇಅರಿವಿಲ್ಲದೆ, ಇತ್ತೀಚಿಗೆ ವಿಧಾನಪರಿಷತ್‌ಚುನಾವಣಾ ಫಲಿತಾಂಶ ಹೊರ ಬಿದ್ದಸಂದರ್ಭದಲ್ಲಿ ಕೊತ್ತೂರು ಮಂಜುನಾಥ್ ತಾವು ಕೋಲಾರದ ಆಕಾಂಕ್ಷಿಯಾಗಿದ್ದು,ಹಾಲಿ ಶಾಸಕ ಕೆ.ಶ್ರೀನಿವಾಸಗೌಡಸ್ಪರ್ಧಿಸದಿದ್ದರೆ ತಾವು ಸ್ಪರ್ಧಿಸುವುದಾಗಿಹೇಳಿಕೆ ನೀಡಿರುವುದನ್ನು ತಾವುಖಂಡಿಸುತ್ತೇವೆ ಎಂದು ತಿಳಿಸಿದರು.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಕ್ಕೂಟ ರಚಿಸಿಕೊಂಡುಕೊತ್ತೂರು ಮಂಜುನಾಥ್‌ಜೊತೆಯಲ್ಲಿಯೇ ಬಿಜೆಪಿಗೆ ಬೆಂಬಲನೀಡಿದ್ದ ನಜೀರ್ ಅಹಮದ್‌ರಿಗಾದರೂಟಿಕೆಟ್ ನೀಡುವಂತೆ ಕೇಳಬೇಕಿತ್ತು, ಆದರೆ,ಅಲ್ಪಸಂಖ್ಯಾತರ ಕೋಟಾವನ್ನು ಕಡೆಗಣಿ ಸುವಂತೆ ತಾವು ಸ್ಪರ್ಧಿಸುವುದಾಗಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.
ಕೋಲಾರ ಕ್ಷೇತ್ರದಿಂದ ನಿಸಾರ್ ಅಹಮದ್ ನಂತರ ಯಾವುದೇ ಅಲ್ಪಸಂಖ್ಯಾತರು ಗೆದ್ದಿಲ್ಲ, ಏಕೆಂದರೆ ಪಕ್ಷವು ಹೊರಗಿನವರಿಗೆ ಮಣೆ ಹಾಕುತ್ತಿದೆ. ಆದ್ದರಿಂದ ಕೋಲಾರದಿಂದ ಸ್ಪರ್ಧಿಸಲುತಾವು ಸಿದ್ಧವಿದ್ದು, ತಮ್ಮನ್ನು ಸೇರಿದಂತೆಸ್ಥಳೀಯ ಯಾರಿಗಾದರೂ ಟಿಕೆಟ್ ನೀಡ ಬೇಕು, ಅಲ್ಪಸಂಖ್ಯಾತರಿಗೆ ಹೊರತು ಬೇರೆ ಯಾರಿಗೂ ಟಿಕೆಟ್ ಹಂಚಿಕೆ ಮಾಡ ಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರಲ್ಲಿ ಮನವಿ ಮಾಡಿದರು.
ತಮ್ಮ ತಂದೆ 50 ವರ್ಷಗಳ ಹಿಂದೆ ಶಾಸಕರಾಗಿದ್ದವರು. ಅವರ ಪುತ್ರರಾಗಿ ತಮಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅರ್ಹತೆ ಇದೆ, ಇತ್ತೀಚಿಗೆ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸಹಕಾರದಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಅನಿಲ್‌ಕುಮಾರ್ ಗೆಲುವು ಸಾಧಿಸಿದರು. ಇದರಿಂದಲೇ ಕೋಲಾರ ಜಿಲ್ಲೆ ಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಕ್ಷೇತ್ರಗಳಲ್ಲಿಯೂ ಗೆಲ್ಲುವ ಅರ್ಹತೆ ಇದೆ ಎಂಬು ದು ಸಾಬೀತಾಗಿದೆ ಎಂದು ಹೇಳಿದರು.