Advertisement
ಕರ್ನಾಟಕ ಸರಕಾರ ವೀರಶೈವ ಧರ್ಮದ ಜಂಗಮರೇ ಬೇಡ ಜಂಗಮರೆಂದು ಗೆಜೆಟ್ ವರದಿಯಲ್ಲಿ ಜಾರಿ ಮಾಡಲಾಗಿದೆ. ಜಾತಿ ಪ್ರಮಾಣಪತ್ರ ನೀಡಲು ಜಿಲ್ಲಾಧಿಕಾರಿಗಳು ಮಾರ್ಗಸೂಚಿ ಆದೇಶ ನೀಡಿದ್ದಾರೆ. ಆದರೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಸ್ಥಳ ಸಮೀಕ್ಷೆ ನಡೆಸದೇ ಸರಕಾರಿ ಸುತ್ತೋಲೆಗಳನ್ನು ನೋಡದೇ ಎಲ್ಲೋ ಕುಳಿತು ಇವರು ಬೇಡ ಜಂಗಮರಲ್ಲ. ಈ ಭಾಗದಲ್ಲಿ ಬೇಡ ಜಂಗಮರು ವಾಸವಾಗಿಲ್ಲ ಎಂದು ತಪ್ಪು ಮಾಹಿತಿ ನೀಡಿ ಕರ್ತವ್ಯಲೋಪ ಎಸೆಗಿದ್ದಾರೆ. ಕಂದಾಯ ನಿರೀಕ್ಷಕರಿಗೆ ಬೇಡ ಜಂಗಮರ ಸ್ಥಳ ತನಿಖೆ ನಡೆಸಿ ಸರಕಾರದ ಮಾರ್ಗಸೂಚಿ ಪ್ರಕಾರ ಪಂಚನಾಮೆ ಮಾಡಲು ಆದೇಶ ನೀಡಬೇಕು. ಇಲ್ಲವಾದರೆ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ದೂರಿದರು. ಜಿಲ್ಲೆಯಲ್ಲಿ ವಾಸವಾಗಿರುವ ಬಗ್ಗೆ ಜನಗಣತಿ ಅಧಿಕಾರಿಗಳು ನೀಡಿದ ಮಾಹಿತಿ, ಎಲ್ಲ ದಾಖಲೆಗಳನ್ನು ಒದಗಿಸುತ್ತೇವೆ. ಒಂದು ವೇಳೆ ಸರಕಾರದಿಂದ ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡಬಾರದೆಂಬ ಲಿಖೀತ ಆದೇಶವಿದ್ದರೆ ನೀಡಬೇಕು.
ವಾಸವಾಗಿರುವ ಬೇಡ ಜಂಗಮದವರಿಗೆ ಕೂಡಲೇ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ದೇವದುರ್ಗ ಸಂಸ್ಥಾನ ಶಿಖರಮಠದ ಶ್ರೀ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಸಮಾಜದ ಅಧ್ಯಕ್ಷ ಗುರುಸ್ವಾಮಿ ಸ್ಥಾವರಮಠ, ಕಾಶಿನಾಥ ಸ್ವಾಮಿ, ಶಾಂತಮಲ್ಲಯ್ಯ ಸ್ವಾಮಿ, ಬಸವರಾಜ, ಚನ್ನಯ್ಯತಾತಾ, ಶರಣಯ್ಯ ಸ್ವಾಮಿ, ನಾಗಯ್ಯ ಸ್ವಾಮಿ, ವಿರೂಪಾಕ್ಷಿ ಗಂಧಮಠ, ಚನ್ನಯ್ಯಸ್ವಾಮಿ, ಬೂದೆಯ್ಯ, ಸಿದ್ದರಾಮೇಶ್ವರ, ಸಿದ್ದಯ್ಯಸ್ವಾಮಿ ಸೇರಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.