Advertisement

Kaup ಬಾಲಕಿಯ ಮದುವೆ: ಪತಿ,ಹೆತ್ತವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

12:41 AM Jul 26, 2024 | Team Udayavani |

ಕಾಪು: ಅಪ್ರಾಪ್ತ ವಯಸ್ಕ ಯುವತಿಯನ್ನು ಮದುವೆಯಾಗಿ ಮಗುವಿನ ಜನ್ಮಕ್ಕೆ ಕಾರಣನಾದ ಪತಿ ಮತ್ತು ಆತನ ಮನೆಯವರ ವಿರುದ್ಧ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬಿಹಾರ ಮೂಲದ ಚಾಂದನಿ ಕಾತೂನ್‌ ದೂರುದಾರ ಮಹಿಳೆ. ಆಕೆ ಪತಿ ಇನಿ¤ಯಾಜ್‌ ದೇವನ್‌ ಹಾಗೂ ಮದುವೆಗೆ ಕಾರಣರಾಗಿದ್ದ ತನ್ನ ತಂದೆ ಮೊಹಮ್ಮದ್‌ ತಯ್ಯಬ್‌ ರಾಯಿನ್‌ ಮತ್ತು ತಾಯಿ ಜುಲೇಖಾ ಖಾತೂನ್‌ ವಿರುದ್ಧ ದೂರು ನೀಡಿದ್ದಾರೆ.

ಚಾಂದನಿ ಅವರಿಗೆ 16 ವರ್ಷ ತುಂಬಿದ್ದ ವೇಳೆ 2022 ಜೂ. 12ರಂದು ಇನಿ¤ಯಾಜ್‌ನೊಂದಿಗೆ ಹೆತ್ತವರು ವಿವಾಹ ಮಾಡಿಕೊಟ್ಟಿದ್ದು, ಅನಂತರ ಪತಿಯ ಮನೆಯಲ್ಲಿ ವಾಸವಿದ್ದರು. ಆ ಬಳಿಕ 2023 ಎ. 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಅನಂತರ ಮಗುವಿನೊಂದಿಗೆ ದಂಪತಿ ಉದ್ಯಾವರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ವೇಳೆ ಚಾಂದನಿ ಮತ್ತೆ ಗರ್ಭಿಣಿಯಾಗಿದ್ದರು. ಗರ್ಭಿಣಿ ಮಹಿಳೆಗೆ ಜು. 13ರಂದು ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ ವೇಳೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಕಾಪು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next