Advertisement
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮೃತ ವಿದ್ಯಾರ್ಥಿನಿ ತಂದೆ ರೋಶನ್ ನಾರಾಯಣ ಪಾಲೆಕರ್ ಮಾತನಾಡಿ, ತನ್ವಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, 8ನೇ ತರಗತಿಯವರೆಗೆ ಕಾರವಾರದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಮುಗಿಸಿ 9ನೇ ತರಗತಿಗೆ ಕುಂದಾಪುರ ವಿದ್ಯಾಸಂಸ್ಥೆಗೆ ಸೇರಿಸಲಾಗಿತ್ತು. ಧೈರ್ಯವಂತೆ ಆಗಿದ್ದ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿ ಹೊಂದಿರಲಿಲ್ಲ. ಪೊಲೀಸರು ಈ ಬಗ್ಗೆ ವ್ಯವಸ್ಥಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ವಿನಂತಿಸಿದರು.ಕಾರವಾರ ಮೂಲದ ಕಾಜುಬಾರು ನಿವಾಸಿಯಾಗಿರುವ ತನ್ವಿ ಈ ವರ್ಷ ಇಲ್ಲಿ ಪ್ರವೇಶ ಪಡೆದಿದ್ದಳು. ಮನೆಯಿಂದ ಹೊರಡುವಾಗಲೂ ಖುಷಿಯಿಂದ ಹೊರಟಿದ್ದಳು. ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಮೇಲೆ ನಮಗೆ ಅನುಮಾನವಿಲ್ಲ. ಆದರೆ ಈ ಸಾವು ಅನುಮಾನದಿಂದ ಕೂಡಿದೆ ಎಂದು ತಂದೆ ರೋಶನ್ ತಿಳಿಸಿದರು.