Advertisement

ಹೆಬ್ರಿ: ಪ್ರಿಯಕರ ಪೋನ್ ಕಾಲ್ ಸ್ವೀಕರಿಸಿಲ್ಲವೆಂದು ಮನನೊಂದು ಪ್ರಿಯತಮೆ ಆತ್ಮಹತ್ಯೆ

12:20 PM Apr 19, 2022 | Team Udayavani |

ಹೆಬ್ರಿ: ತನ್ನ ಪ್ರಿಯಕರ ಪೋನ್ ಕರೆ ಸ್ವೀಕರಿಸಿಲ್ಲವೆಂಬ ಕಾರಣಕ್ಕೆ  ವಿಷ ಪದಾರ್ಥ ಸೇವೆಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಗೆ ದಾಖಲಾದ ಪ್ರಿಯತಮೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ  ಘಟನೆ ಹೆಬ್ರಿ ಸಮೀಪ ಸಂತೆಕಟ್ಟೆಯಲ್ಲಿ ನಡೆದಿದೆ.

Advertisement

ಮೂಲತ ಮೂಡುಗೆರೆ ತಾಲೂಕಿನ ಕುಸುಮಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಕುಸುಮಾರವರು ಹೆಬ್ರಿ ಸಂತೆಕಟ್ಟೆಯಲ್ಲಿ ಹೋಂ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದು ಚಿಕ್ಕ ಮಗಳೂರು ಜಿಲ್ಲೆಯ ಯುವಕನನ್ನು ಪ್ರೀತಿಸುತ್ತಿದ್ದರು.

ಆತನು ಆಕೆಯ ಪೋನ್ ಕರೆಯನ್ನು ಸ್ವೀಕರಿಸದ ಕಾರಣ ಹಾಗೂ ಇನ್ನು ಮುಂದಕ್ಕೆ ಆತನು ತನಗೆ ಸಿಕ್ಕುವುದಿಲ್ಲವೆಂದು ಬೇಸರಗೊಂಡು ಎ.11 ರಂದು ಬೆಳಿಗ್ಗೆ ವಿಷ ಪದಾರ್ಥವನ್ನು ಹಾಲಿನಲ್ಲಿ ಬೆರೆಸಿ ಕುಡಿದಿದ್ದರು. ಬಳಿಕ ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ರವಿವಾರ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next