Advertisement

ನೀನೇನು ಟ್ರಂಪ್‌ ಮಗನಾ? ಚುಡಾಯಿಸಿದಾತನಿಗೆ ಯುವತಿಯಿಂದ ದೊಣ್ಣೆ ಏಟು

05:44 PM Jul 17, 2018 | Team Udayavani |

ಜೈಪುರ : ರಾಜಸ್ಥಾನದ ಭರತ್‌ಪುರ ನಗರದಲ್ಲಿ  ತರುಣಿಯೊಬ್ಬಳು ತನ್ನನ್ನು ಬೆನ್ನಟ್ಟಿ ಚುಡಾಯಿಸುತ್ತಿದ್ದ ಮತ್ತು ತನ್ನ ವಿರುದ್ಧ ವದಂತಿಗಳನ್ನು ಹರಡುತ್ತಿದ್ದ  ಯುವಕನಿಗೆ ದೊಣ್ಣೆಯಿಂದ ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡಿ, “ನೀನೇನು ಟ್ರಂಪ್‌ ಮಗನಾ’ ಎಂದು ಸಿಟ್ಟಿನ ಭರದಲ್ಲಿ  ಪ್ರಶ್ನಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. 

Advertisement

“ನಾನಿಲ್ಲಿ ಬಂದಿರೋದು ಕಷ್ಟಪಟ್ಟು ದುಡಿಯೋಕೆ; ನೀನು ನನ್ನ ಹೆಸರು ಹಾಳು ಮಾಡ್ತಿಯಾ ? ನೀನೇನು ಡೊನಾಲ್ಡ್‌ ಟ್ರಂಪ್‌ ಮಗನಾ?’ ಎಂದು ತರುಣಿಯು ಯುವಕನಿಗೆ ದೊಣ್ಣೆಯ ರುಚಿ ತೋರಿಸುವಾಗ ಸಿಟ್ಟಿನ ಆವೇಶದಲ್ಲಿ ಹೇಳಿರುವ ಮಾತುಗಳು ವಿಡಿಯೋದಲ್ಲಿ ದಾಖಲಾಗಿವೆ.  

“ಕೆಲವು ಹುಡುಗರು ನನ್ನ ಹೆಸರು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಇಂಥವರಿಗೆ ನಾನು ಹೇಳ್ಳೋದು “ಹುಡುಗೀರನ್ನ ವೀಕ್‌ ಅಂತ ತಿಳಿಯಬೇಡಿ; ಯಾವ ಹುಡುಗಿಯೂ ವೀಕ್‌ ಅಲ್ಲ. ನೀನು ನಿನ್ನ ಲಿಮಿಟ್‌ ದಾಟಿದರೆ ನಾನು  ಧ್ವನಿ ಎತ್ತುತ್ತೇನ; ಕೊನೆಗೆ ನಿನ್ನನ್ನು ಜೀವ ಸಹಿತ ಬಿಡೋದಿಲ್ಲ’ ಎಂದು ತರುಣಿಯು ಗುಡುಗಿರುವುದು ವಿಡಿಯೋದಲ್ಲಿ ಕೇಳಿಬರುತ್ತದೆ.

ಈ ಹುಡುಗಿಯನ್ನು ದಿನ ನಿತ್ಯ ಚುಡಾಯಿಸುತ್ತಿದ್ದ ತರುಣನು “ಈಕೆ ನನ್ನ ಗರ್ಲ್ ಫ್ರೆಂಡ್‌; ದಿನ ನಿತ್ಯ ನನ್ನ ಜತೆ ನಾಲ್ಕಾರು ಬಾರಿ ಹರಟೆ ಹೊಡೆಯುತ್ತಾಳೆ’ ಎಂದು ತನ್ನ ಸ್ನೇಹಿತರಲ್ಲಿ ಬಹಿರಂಗವಾಗಿ ಹೇಳುತ್ತಿದ್ದ. 

ಈ ತರುಣನನ್ನು ದಾರಿ ಹೋಕರ ನಡುವೆ ಹಿಡಿದು ಹೊಡೆದ ಯುವತಿ ಆತನಿಗೆ ಎಲ್ಲರ ಎದುರು ಕಪಾಳಮೋಕ್ಷ ಮಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Advertisement

ಈ ಘಟನೆಯ ಮಾಹಿತಿ ಪಡೆದಿರುವ ಭರತ್‌ಪುರ ಎಸ್‌ಪಿ ಅನಿಲ್‌ ತಾಂಕ್‌ ಅವರು “ಈ ವರೆಗೆ ನಮಗೆ ಯಾವುದೇ ದೂರು ಬಂದಿಲ್ಲ; ಬಂದಾಗ ತನಿಖೆ ಮಾಡುತ್ತೇವೆ’ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ತರುಣಿಯು “ನಾನು ಆತ ಸುಧಾರಣೆಯಾಗಲೆಂದು  ಒಂದು ಛಾನ್ಸ್‌ ಕೊಟ್ಟಿದ್ದೇನೆ; ಹಾಗಾಗಿ ಪೊಲೀಸರಿಗೆ ದೂರು ನೀಡಿಲ್ಲ’ ಎಂದು ಹೇಳಿದ್ದಾಳೆ. 

Advertisement

Udayavani is now on Telegram. Click here to join our channel and stay updated with the latest news.

Next