ಅನುಭವಿ ನಿರ್ದೇಶಕರು, ಕಲಾವಿದರು ಚಿತ್ರ ನಿರ್ಮಾಣದತ್ತ ಹೆಜ್ಜೆ ಇಡುತ್ತಿದ್ದಾರೆ. ಇದೀಗ ಈ ಸಾಲಿಗೆ ಹಾಸ್ಯ ನಟ ತರಂಗ ವಿಶ್ವ ಸೇರಿದ್ದಾರೆ. “ಎದಿತ್ ಫಿಲಂ ಫ್ಯಾಕ್ಟರಿ’ ಎಂಬ ನಿರ್ಮಾಣ ಸಂಸ್ಥೆ ಅಡಿಯಲ್ಲಿ “ಗಿರ್ಕಿ” ಹೊಡೆಯಲು ಸಿದ್ದರಾಗಿದ್ದಾರೆ.
ನಿರ್ದೇಶಕ ವೀರೇಶ್ ಪಿ ಎಮ್ ಅವರ ಚೊಚ್ಚಲ ನಿರ್ದೇಶನದ “ಗಿರ್ಕಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು. ಇದೆ ಜುಲೈ 8 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ವೀರೇಶ್ ಪಿ ಎಮ್ “ಗಿರ್ಕಿ ಅಂದರೆ ಸುತ್ತಾಟ, ತಿರುಗು ಎಂದು ಅರ್ಥ. ಸಸ್ಪೆನ್ಸ್-ಥ್ರಿಲ್ಲರ್, ಆ್ಯಕ್ಷನ್, ಕಾಮಿಡಿ , ಲವ್ ಎಲ್ಲಾ ಅಂಶಗಳ ಸುತ್ತ ನಮ್ಮ ಚಿತ್ರ ಸಾಗಿದೆ. ಎಲ್ಲಾ ಚಿತ್ರಗಳಲ್ಲೂ ಸಾಮಾನ್ಯವಾಗಿ ಒಂದೆರಡು ದೃಶ್ಯಗಳಲ್ಲಿ ಕಾಮಿಡಿ ಬಂದು ಹೋದರೆ, ನಮ್ಮ ಚಿತ್ರ ಆರಂಭದಿಂದ ಕೊನೆಯವರೆಗೂ ಕಾಮಿ ಡಿ ಯಲ್ಲೇ ಸಾಗುತ್ತದೆ’ ಎಂದರು.
ನಟ ಹಾಗೂ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ತರಂಗ ವಿಶ್ವ ಮಾತನಾಡಿ, “ಈ ಚಿತ್ರದ ಮೂಲಕ ಹೆಣ್ಣು ಮಕ್ಕಳು ಬಹಳ ಜಾಗೃತರಾಗಿರಬೇಕು, ಯಾರು, ಯಾವ ಸಂದರ್ಭದಲ್ಲಿ ಹೆಣ್ಣನ್ನು ಕೆಟ್ಟದಾರಿ ಎಳೆಯುತ್ತಾರೆ ಎಂಬುದು ತಿಳಿಯದು ಎಂಬುದನ್ನು ತೋರಿಸಿದ್ದೇವೆ. ಚಿತ್ರದ ನಿರ್ಮಾಣದ ಜೊತೆಗೆ ನಮ್ಮ ಸಂಸ್ಥೆ ಹಾಗೂ ಜಯಲಕ್ಷ್ಮೀ ಮೂವಿಸ್ ಸಹಯೋಗದಲ್ಲಿ ಚಿತ್ರ ಹಂಚಿಕೆಯನ್ನು ಮಾಡುವ ನಿಟ್ಟಿನಲ್ಲಿ ಹೆಜ್ಜೆಯನ್ನು ಇಟ್ಟಿದ್ದೇನೆ. ಮಲ್ಟಿಪ್ಲೆಕ್ಸ್ ಸೇರಿಂದಂತೆ 70 ರಿಂದ 100 ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣಲಿದೆ’ ಎಂದರು.
ಚಿತ್ರದ ನಾಯಕ ನಟ ವಿಲೋಕ್, ನಟಿ ದಿವ್ಯಾ ಉರುಡುಗ ಹಾಗೂ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಚಿತ್ರದ ಕುರಿತ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇನ್ನು ಚಿತ್ರಕ್ಕೆ “ಎ ‘ ಸರ್ಟಿಫೀಕೆಟ್ ದೊರೆತಿರುವುದು ಚಿತ್ರತಂಡದ ಅಸಮಾಧಾನಕ್ಕೆ ಕಾರಣವಾಗಿದೆ.
ಚಿತ್ರದಲ್ಲಿ ವಿಲೋಕ್ ರಾಜ್ , ತರಂಗ ವಿಶ್ವ, ದಿವ್ಯಾ ಉರುಡುಗ, ಪಾವನಾ, ಮಂಡ್ಯ ರಮೇಶ್, ಧರ್ಮ ಮುಂತಾದವರು ಚಿತ್ರದ ತಾರಾಬಳಗದ ಲ್ಲಿದ್ದಾರೆ. ವೀರೇಶ್ ಪಿ ಎಮ್ ನಿರ್ದೇಶನ, ವೀರ್ ಸಮರ್ಥ್ ಸಂಗೀತ, ಮಧು ತುಂಬಾಕೆರೆ ಸಂಕಲನ, ನವೀನ್ ಕುಮಾರ್ ಚಲ್ಲಾ ಛಾಯಾಗ್ರಹಣ, ವಿನೋದ್ ಸಾಹಸ ಚಿತ್ರಕ್ಕಿದೆ.