Advertisement

ಲಕ್ಷ ದಾಟಿದ ‘ಗಿರಿಗಿಟ್’ಟೀಸರ್‌

11:40 PM Jul 10, 2019 | mahesh |

ಕೋಸ್ಟಲ್ವುಡ್‌ನ‌ಲ್ಲಿ ಸದ್ಯ ಭರವಸೆ ಮೂಡಿಸಿದ ಸಿನೆಮಾ ‘ಗಿರಿಗಿಟ್’. ಪೋಸ್ಟರ್‌ ಹಾಗೂ ಒಂದೊಂದು ಡೈಲಾಗ್‌ ಮೂಲಕವೇ ಸಾಮಾಜಿಕ ಜಾಲತಾಣದ ಮೂಲಕ ಸುದ್ದಿಯಲ್ಲಿದ್ದ ಸಿನೆಮಾ ಈಗ ಟೀಸರ್‌ ಮೂಲಕ ಸುದ್ದಿಯಾಗಿದೆ. ವಿಶೇಷವೆಂದರೆ ಈ ಟೀಸರ್‌ ಅಮೆರಿಕದಲ್ಲಿ ರಿಲೀಸ್‌ ಆಗಿದೆ. ಅರವಿಂದ ಬೋಳಾರ್‌ ಅವರ ವಿಭಿನ್ನ ಶೈಲಿಯ ವಕೀಲರ ರೋಲ್ನ ಈ ದೃಶ್ಯವನ್ನು ಸದ್ಯ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Advertisement

ರೂಪೇಶ್‌ ಶೆಟ್ಟಿ ಅವರು ಮೊದಲು ಆ್ಯಕ್ಷನ್‌ ಕಟ್ ಹೇಳಿದ ಸಿನೆಮಾ. ನವೀನ್‌ ಡಿ ಪಡೀಲ್, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್‌ ಮಿಜಾರ್‌, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಪ್ರಬುದ್ಧ ಕಲಾವಿದರ ಸಮ್ಮಿಲನದೊಂದಿಗೆ ಗಿರಿಗಿಟ್ ಮೇಲೆ ಬಾರೀ ನಿರೀಕ್ಷೆ ಮೂಡಿದೆ. ಮುಖ್ಯ ಕಲಾವಿದರ ಅಭಿನಯದ ಪೋಸ್ಟರ್‌ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿದೆ.

ಫೇಮಸ್‌ ಕಲಾವಿದರ ವಿಭಿನ್ನ ಅಭಿನಯದ ಚಿತ್ರಗಳು ಕೋಸ್ಟಲ್ವುಡ್‌ನ‌ಲ್ಲಿ ಹೊಸ ಮೂಡ್‌ ಕ್ರಿಯೇಟ್ ಮಾಡಿದೆ. ಅರವಿಂದ ಬೋಳಾರ್‌ ಕೋದಂಡ ಎಂಬ ಲಾಯರ್‌ ಲುಕ್‌ನಲ್ಲಿದ್ದರೆ, ವಾಮಂಜೂರು ಯಕ್ಷಗಾನದ ವೇಷ ಹಾಕಿದ ಪೋಸ್ಟರ್‌ ಇತ್ತೀಚೆಗೆ ಸುದ್ದಿಯಾಗಿತ್ತು. ನವೀನ್‌ ಡಿ.ಪಡೀಲ್ ಮೀಸೆ ಮಾಮನ ರೋಲ್ನಲ್ಲಿ ಕಾಣಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next