ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಹತ್ತಿರಬರುತ್ತಿದ್ದಂತೆ ಜನರಿಗೆ ಉಡುಗೊರೆ ನೀಡಿ ಜನರಿಗೆ ಆಮಿಷ ಒಡ್ಡುವ ಪ್ರಸಂಗಗಳು ಅಲ್ಲಲ್ಲಿ ನಡೆಯುತ್ತಿದೆ. ಚಿಕ್ಕಮಗಳೂರಿನ ಮೂಡಿಗೆರೆ ಮೀಸಲು ಕ್ಷೇತ್ರದ ಮತದಾರರಿಗೆ ವೆರೈಟಿ ವೆರೈಟಿ ಗಿಫ್ಟ್ ಗಳು ಸಿಗುತ್ತಿವೆ.
ಮಾಜಿ ಸಚಿವೆ ಮೋಟಮ್ಮ ಪುತ್ರಿ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಯನ ಮೋಟಮ್ಮ ಅವರು ಮತದಾರರನ್ನು ಒಲಿಸಲು ಗಿಫ್ಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಮತದಾರರ ಮನ ಗೆಲ್ಲಲು ಗ್ರಾಮ ಮಟ್ಟದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜನೆ ಮಾಡಿದ್ದು, ಸೀರೆ, ಪುಸ್ತಕ ಪೆನ್ ವಿತರಣೆ ಮಾಡಿದ್ದಾರೆ.
ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾದವರಿಗೆ 5 ಸಾವಿರ ಹಣ, ಸೀರೆ ಗಿಫ್ಟ್ ನೀಡಿದ್ದಾರೆ.ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಸೀರೆ, ಶಾಲಾ ಮಕ್ಕಳಿಗೆ ಪೆನ್, ಪುಸ್ತಕ ಗಿಫ್ಟ್ ನೀಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ನಯನ ಅವರು ಮತದಾರರ ಸೆಳೆಯಲು ವೆರೈಟಿ ವೆರೈಟಿ ಗಿಮಿಕ್ ಮಾಡುತ್ತಿದ್ದಾರೆ.