ಸಾಹಿದಾಬಾದ್ ಏರಿಯಾದಲ್ಲಿ ವಾಸವಿದ್ದ ಗುಡ್ಡು (26) ಎಂಬ ವ್ಯಕ್ತಿಯನ್ನು ಆತನ ತಾಯಿ ದಿನಸಿ ತರುವಂತೆ ಕಳುಹಿಸಿದ್ದರು. ಆದರೇ ಆತ ಹಿಂದಿರುವಾಗ ದಿನಸಿಯೊಂದಿಗೆ ಹೆಂಡತಿಯನ್ನೂ ಕರೆತಂದಿದ್ದ. ಎರಡು ತಿಂಗಳ ಹಿಂದೆ ಗುಟ್ಟಾಗಿ ಮದುವೆಯಾಗಿದ್ದ ಭೂಪ, ಲಾಕ್ ಡೌನ್ ಕಾರಣದಿಂದ ಆಕೆಯನ್ನು ಮನೆಗೆ ಕರೆತರಲು ಆಗಿರಲಿಲ್ಲ. ಇದೀಗ ಲಾಕ್ ಡೌನ್ ಕೊಂಚ ಸಡೀಲವಾದ್ದರಿಂದ ದಿನಸಿ ತರುವ ನೆಪದಲ್ಲಿ ಪತ್ನಿಯನ್ನು ಕರೆತಂದಿದ್ದಾನೆ.
ವಿಷಯ ತಿಳಿಯದ ತಾಯಿ ಗಾಬರಿಗೊಂಡಿದ್ದು ಮಾತ್ರವಲ್ಲದೆ ಈ ವಿವಾಹವನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಎರಡು ತಿಂಗಳ ಹಿಂದೆಯೇ ಹರಿದ್ವಾರದ ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿದ್ದೆ. ಆದರೆ, ಲಾಕ್’ಡೌನ್ ಇದ್ದ ಪರಿಣಾಮ ಪ್ರಮಾಣಪತ್ರ ಸಿಕ್ಕಿರಲಿಲ್ಲ. ಮಾತ್ರವಲ್ಲದೆ ಮದುವೆಗೆ ಸಾಕ್ಷಿಗಳ ಕೊರತೆಯಿತ್ತು. ಈ ಕಾರಣದಿಂದ ಪತ್ನಿ ಸವಿತಾ ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಇದೀಗ ಪತ್ನಿಯನ್ನು ಮನೆಗೆ ಕರೆತರಲು ನಿರ್ಧರಿಸಿದ್ದೆ ಎಂದು ಗುಡ್ಡು ಹೇಳಿದ್ದಾರೆ.
ಸೊಸೆಯನ್ನು ಮನೆಯೊಳಗೆ ಸೇರಿಸಲು ಗುಡ್ಡು ತಾಯಿ ಒಪ್ಪದ ಕಾರಣ ಇದೀಗ ಪೊಲೀಸರು ಸವಿತಾ ನೆಲೆಯೂರಿದ್ದ ದೆಹಲಿಯ ಬಾಡಿಗೆ ಮನೆ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದು, ದಂಪತಿಗಳು ನೆಲೆಯೂರಲು ಅವಕಾಶ ಮಾಡಿಕೊಡುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ.
Advertisement