ಗಾಜಿಯಾಬಾದ್: ಕೋವಿಡ್ 19 ಸೋಂಕಿಗೆ ಒಳಗಾಗಿದ್ದ 59 ವರ್ಷದ ವ್ಯಕ್ತಿಯಲ್ಲಿ ಕಪ್ಪು, ಬಿಳಿ ಮತ್ತು ಹಳದಿ ಫಂಗಸ್ ಪತ್ತೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಮಣಿಪಾಲ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉದ್ಯಮಿ ಸಾವು
ಕುನ್ವರ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಟಾಕ್ಸೆಮಿಯಾ(ಜೀವಾಣುವಿನಿಂದ ರಕ್ತ ವಿಷವಾಗುವುದು) ಕಾರಣದಿಂದ ಶುಕ್ರವಾರ (ಮೇ 28) ನಿಧನರಾಗಿರುವುದಾಗಿ ರಾಜ್ ನಗರ್ ಪ್ರದೇಶದ ಹರ್ಷ ಆಸ್ಪತ್ರೆಯ ಇಎನ್ ಟಿ ತಜ್ಞ ಡಾ.ಬಿ.ಪಿ. ತ್ಯಾಗಿ ಪಿಟಿಐಗೆ ತಿಳಿಸಿದ್ದಾರೆ.
ಕುನ್ವರ್ ಸಿಂಗ್ ಅವರು ಸಂಜಯ್ ನಗರದ ವಕೀಲರಾಗಿದ್ದಾರೆ. ಕೋವಿಡ್ 19 ಸೋಂಕು ದೃಢಪಟ್ಟಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮೇ 24ರಂದು ಎಂಡೋಸ್ಕೋಪಿ ನಡೆಸಿದಾಗ, ಹಳದಿ, ಬಿಳಿ ಮತ್ತು ಕಪ್ಪು ಫಂಗಸ್ ಪತ್ತೆಯಾಗಿತ್ತು ಎಂದು ತ್ಯಾಗಿ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಮುರಾದ್ ನಗರದ 59 ವರ್ಷದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದು, ಹಳದಿ ಶಿಲೀಂಧ್ರ ಸೋಂಕು ಕೂಡಾ ಪತ್ತೆಯಾಗಿದೆ. ರಾಜೇಶ್ ಕುಮಾರ್ ಅವರ ಮೆದುಳಿನಲ್ಲಿ ಫಂಗಸ್ ಪತ್ತೆಯಾಗಿದ್ದು, ಅವರ ದವಡೆಯ ಅರ್ಧ ಭಾಗವನ್ನು ತೆಗೆದು ಹಾಕಲಾಗಿದೆ ಎಂದು ವರದಿ ಹೇಳಿದೆ.