ನವಿಮುಂಬಯಿ: ಶ್ರೀ ಕ್ಷೇತ್ರ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ನಾಗರ ಪಂಚಮಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಆ. 15 ರಂದು ನಡೆಯಿತು.
ಇದೇ ಸಂದರ್ಭದಲ್ಲಿ ಆಶ್ಲೇಷಾ ಬಲಿ ಸೇವೆಯು ಅದ್ದೂರಿಯಾಗಿ ಜರಗಿತು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆಯಿಂದ ನಾಗದೇವರಿಗೆ ನೈಮಲ್ಯì ವಿಸರ್ಜನೆ, ನಾಗ-ತನು ಸೇವೆ, ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಸೀಯಾಳ ಆಭಿಷೇಕ, ಹಾಲಿನ ಅಭಿಷೇಕ ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಜರಗಿತತು.
ಆನಂತರ ಹೊಟೇಲ್ ಉದ್ಯಮಿಗಳಾದ ವಿಠuಲ ಶೆಟ್ಟಿ ಗಾಂವೆªàವಿ, ಕೃಷ್ಣ ಶೆಟ್ಟಿ ಮತ್ತು ಪೆಸ್ಟ್ ಮೊಟೇìಮ್ ಇಂಡಿಯಾ ಲಿಮಿಡೆಟ್ ಇದರ ಜೆ. ಪಿ. ಶೆಟ್ಟಿ ಅವರ ಸೇವಾರ್ಥಕವಾಗಿ ಅನ್ನಪ್ರಸಾದ ವಿತರಣೆ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಅವರ ಪೌರೋಹಿತ್ಯದಲ್ಲಿ ಜರಗಿದ ಈ ದೇವತಾ ಕಾರ್ಯದಲ್ಲಿ ಸಹ ಅರ್ಚಕರಾದ ಶ್ರೀಧರ ಭಟ್, ಶಶಾಂಕ್ ಭಟ್, ನಾಗರಾಜ್ ಭಟ್, ಅಶೋಕ್ ಭಟ್ ಮೊದಲಾದವರು ಸಹಕರಿಸಿದರು.
ದೇವಾಲಯ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ನಂದಿಕೂರು ಜಗದೀಶ್ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ, ಸಮಿತಿಯ ಸದಸ್ಯರುಗಳಾದ ರಾಘು ಆರ್. ಕೋಟ್ಯಾನ್, ಕುಟ್ಟಿ ಎ. ಕುಂದರ್, ಸುಧಾಕರ ಸಿ. ಪೂಜಾರಿ, ವಿಶ್ವನಾಥ್ ಎಸ್. ಶೆಟ್ಟಿ, ಅಣ್ಣು ಎಂ. ಶೆಟ್ಟಿ, ಮಹಾಬಲ ಡಿ. ಶೆಟ್ಟಿ, ಹರೀಶ್ ಶೆಟ್ಟಿ ಕುರ್ಕಾಲ್, ಹರೀಶ್ ಶೆಟ್ಟಿ ಪಡುಬಿದ್ರೆ, ಹರೀಶ್ ಶೆಟ್ಟಿ ನಲ್ಲೂರು, ಶಕುಂತಳಾ ಎಸ್. ಶೆಟ್ಟಿ ಹಾಗೂ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಳ ಮತ್ತು ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ ಸದಸ್ಯರು, ಉಪ ಸಮಿತಿಯ ಹಾಗೂ ಮಹಿಳಾ ವಿಭಾಗದ ಸದಸ್ಯೆಯರು ಸಹಕರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನಾಗರ ಪಂಚಮಿಯ ಉತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.