Advertisement

ಗನಿ ಬಂಧನಕ್ಕೆ ಆಗ್ರಹಿಸಿ “ಇಳಕಲ್ಲ ಚಲೋ’

06:04 PM Jan 29, 2022 | Team Udayavani |

ಇಳಕಲ್ಲ: ವಿವಾದಾತ್ಮಕ ಹೇಳಿಕೆ ನೀಡಿದ್ದ ಎಐಎಂಐಎಂ ನಾಯಕ ಉಸ್ಮಾನ ಗನಿಯನ್ನು ಬಂಧಿಸದೇ ಪೊಲೀಸರು ಕರ್ತವ್ಯ ಲೋಪವೆಸಗಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖ್ಯ ವಕ್ತಾರ ಶ್ರೀಶೈಲಗೌಡ ಪಾಟೀಲ ಆಪಾದಿಸಿದರು.

Advertisement

ನಗರದಲ್ಲಿ ಶುಕ್ರವಾರ ಬಾಗಲಕೋಟೆ ಜಿಲ್ಲಾ ಹಿಂದೂ ಜಾಗರಣ ವೇದಿಕೆಯ “ಇಳಕಲ್ಲ ಚಲೋ’ ಪ್ರತಿಭಟನಾ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಳಿ ಸ್ವಾಮಿಗಳು ಮೈಸೂರಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಮರುದಿನವೇ ಅವರನ್ನು ಬಂಧಿಸಲಾಗಿತ್ತು. ಆದರೆ ಭಾರತಮಾತೆ-ಹಿಂದೂ ತಾಯಂದಿರನ್ನು ಅವಮಾನಿಸಿದ್ದರೂ ಗನಿಯನ್ನು ಬಂಧಿ ಸಿಲ್ಲ ಏಕೆ ? ರಾಜ್ಯದಲ್ಲಿ ಮೈಸೂರಿಗೆ ಒಂದು ಕಾನೂನು ಹಾಗೂ ಬಾಗಲಕೋಟೆ ಜಿಲ್ಲೆಗೆ ಇನ್ನೊಂದು ಕಾನೂನು ಏನಾದರೂ ಇದೆಯೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮೇಲೂ ಒತ್ತಡ ಹೇರುತ್ತೇವೆ. ಕೂಡಲೇ ಗನಿಯನ್ನು ಬಂಧಿ ಸಿ ಗಡೀಪಾರು ಮಾಡಬೇಕು. ಇಲ್ಲದಿದ್ದರೆ ಹಿಂದೂ ಜಾಗರಣಾ ವೇದಿಕೆಯೇ ತೀರ್ಮಾನ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದರು.

ಸಾನ್ನಿಧ್ಯ ವಹಿಸಿದ್ದ ಹೂವಿನಹಡಗಲಿ ಅಭಿನವ ಹಾಲುಶ್ರೀ ಸ್ವಾಮೀಜಿ ಮಾತನಾಡಿ, ತಾಯಿ ಎನ್ನುವ ಪದಕ್ಕೆ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಅತ್ಯಂತ ಉನ್ನತ ಸ್ಥಾನವಿದೆ. ಪತ್ನಿಯನ್ನು ಹೊರತುಪಡಿಸಿ ಉಳಿದ ಎಲ್ಲ ಸ್ತ್ರೀಯರು ಮಾತೃ ಸ್ವರೂಪ ಎಂದು ಕಾಣುವ ನಮ್ಮ ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯ ಅರಿವು ಗನಿ ಅಂಥವರಿಗೆ ಹೇಗೆ ಗೊತ್ತಾಗಬೇಕು ಎಂದರು. ದಿವ್ಯಸಾನಿಧ್ಯ ವಹಿಸಿದ್ದ ಗುಳೇದಗುಡ್ಡ ಮರಡಿಮರದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಹಿಂದೂ ಧರ್ಮ ವಿರೋಧಿಸುವವರು ಎಷ್ಟು ಹುಟ್ಟುತ್ತಾರೆಯೋ ಅಷ್ಟು ನಮ್ಮ ಸಂಘಟನೆ ಗಟ್ಟಿಯಾಗುತ್ತದೆ. ಯಾವುದೇ ಧರ್ಮದ ದೂಷಣೆ ಅಥವಾ ಅವಹೇಳನ ನಮ್ಮ ಉದ್ದೇಶವಲ್ಲ. ಸಕಲರನ್ನೂ ಕರೆದುಕೊಂಡು ಹೋಗುವ ಧರ್ಮ ಹಿಂದೂ ಧರ್ಮ ಎಂಬುದನ್ನು ಇತರರು ಅರಿತುಕೊಳ್ಳಬೇಕು ಎಂದರು. ವೇದಿಕೆ ಪ್ರಾಂತ ಪ್ರಮುಖ ಶ್ರೀಕಾಂತ ಹೊಸಕೇರಾ ಮಾತನಾಡಿದರು.

ಇಳಕಲ್ಲ: ವಿವಾದಾತ್ಮಕ ಹೇಳಿಕೆ ನೀಡಿರುವ ಎಐಎಂಐಎಂ ರಾಜ್ಯಾಧ್ಯಕ್ಷ ಉಸ್ಮಾನಗನಿ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಬಾಗಲಕೋಟ ಜಿಲ್ಲಾ ಹಿಂದೂ ಜಾಗರಣಾ ವೇದಿಕೆಯಿಂದ “ಇಳಕಲ್ಲ ಚಲೋ’ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು.

ನಗರದ ಬನ್ನಕಟ್ಟಿಯ ಪೊಲೀಸ್‌ ಮೈದಾನದಿಂದ ಆರಂಭವಾದ ಮೆರವಣಿಗೆ ಅಂಬಾಭವಾನಿ ದೇವಸ್ಥಾನ, ಕೊಪ್ಪರದ ಪೇಟದ ಬನಶಂಕರಿ ದೇವಸ್ಥಾನ, ರಾಮಮಂದಿರ, ಕಾಯಿಪಲ್ಲೆ ಮಾರುಕಟ್ಟೆ, ಬಸವಣ್ಣದೇವರ ದೇವಸ್ಥಾನ, ಮುಖ್ಯಬಜಾರ್‌ ರಸ್ತೆ, ಮಹಾಂತೇಶ್ವರ ಮಠ, ಗಾಂಧಿ ಚೌಕ್‌, ಚಾವಡಿ ಮಾರ್ಗವಾಗಿ ದಿ| ಎಸ್‌. ಆರ್‌. ಕಂಠಿ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತು.

Advertisement

ಈ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು, ನಗರದ ಅನೇಕ ಸಂಘ- ಸಂಸ್ಥೆಗಳು, ಸಮಾಜದ ಮುಖಂಡರು ಪಾಲ್ಗೊಂಡು ಗನಿ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಇಬ್ಬರು ಎಸ್‌ಪಿ, ನಾಲ್ವರು ಡಿವಾಯ್‌ಎಸ್‌ಪಿ, ಹತ್ತು ಜನ ಸಿಪಿಐ, 20 ಜನ ಪಿಎಸ್‌ಐ, 350 ಸಿಬ್ಬಂದಿಗಳು, ಎರಡು ಸಿಆರ್‌ಪಿಎಫ್‌ ಹಾಗೂ ನಾಲ್ಕು ಡಿಆರ್‌ ಅನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next