ಹೊಸದಿಲ್ಲಿ: ಮಳಿಗೆಗಳಲ್ಲಿ ಖರೀದಿ ಮಾಡಿದಾಗ ಬಿಲ್ ಕೊಡುವ ಸಂದರ್ಭದಲ್ಲಿ ಗ್ರಾಹಕರ ಮೊಬೈಲ್ ಸಂಖ್ಯೆ ನೋಂದಣಿ ಮಾಡಿಕೊಳ್ಳುವುದು ಅಕ್ರಮ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ(ಡಿಸಿಎ) ಹೇಳಿದೆ. ಈ ಕುರಿತು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಸುತ್ತೋಲೆ ಹೊರಡಿಸಿದ್ದು, ಗ್ರಾಹಕರ ವೈಯಕ್ತಿಕ ಮೊಬೈಲ್ ನಂಬರ್ ಪಡೆಯುವಂತಿಲ್ಲ ಎಂದು ಚಿಲ್ಲರೆ ವ್ಯಾಪಾರಿಗಳಿಗೆ ಸೂಚಿಸಿದ್ದಾರೆ. ಗ್ರಾಹಕರ ಫೋನ್ ನಂಬರ್‌ಗಳನ್ನು ಒತ್ತಾಯವಾಗಿ ಪಡೆಯುವುದು ಸರಿಯಲ್ಲ. ಇದು ಕಡ್ಡಾಯವಲ್ಲ. ಇದು ಉತ್ತಮ ವ್ಯಾಪಾರದ ಲಕ್ಷಣವಲ್ಲ. ಗ್ರಾಹಕ ವ್ಯವಹಾರಗಳ ಕಾಯ್ದೆ ಪ್ರಕಾರ ಇದು ತಪ್ಪು. ಇದು ಗ್ರಾಹಕರ ಖಾಸಗಿತನದ ರಕ್ಷಣೆಯನ್ನು ಒಳಗೊಂಡಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿಲಾಗಿದೆ.