Advertisement

ಬಾಡಿಗೆಗೆ ಕಾರು ಪಡೆದು ಬೀಚ್‌ನಲ್ಲಿ ಹುಚ್ಚಾಟ: ಪೇಚಿಗೆ ಸಿಲುಕಿದ ಚಾಲಕ

02:00 PM Jun 17, 2022 | Team Udayavani |

ಪಣಜಿ: ಗೋವಾ ಬೀಚ್‌ನಲ್ಲಿ ಪ್ರವಾಸಿಗನೊಬ್ಬ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿ, ಪೇಚಿಗೆ ಸಿಲುಕಿದ ಘಟನೆ ಶುಕ್ರವಾರ (ಜೂ.17) ನಡೆದಿದೆ.

Advertisement

ದೆಹಲಿ ಮೂಲದ ಲಲಿತ್‍ಕುಮಾರ್ ದಯಾಳ್ ಎಂಬಾತ ಬಾಡಿಗೆಗೆ ಕಾರನ್ನು ಪಡೆದು ಕಡಲ ತೀರದಲ್ಲಿ ಚಲಾಯಿಸಿದ್ದಾನೆ. ಈ ವೇಳೆ ಕಾರು ನೀರಿನಲ್ಲಿ ಮುಳುಗಿದೆ.

ಘಟನೆ ಹಣಜುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ?: ಅಗ್ನಿಪಥ ಯೋಜನೆಗೆ ಸಿದ್ದರಾಮಯ್ಯ ವಿರೋಧ

ಲಲಿತ್‍ಕುಮಾರ್ ಚಲಾಯಿಸುತ್ತಿದ್ದ ಕ್ರೇಟಾ ಕಾರು, ಶೇಟಯೆ ವಾಡಾದ ಸಂಗೀತಾ ಗವಂಡಾಳಕರ್ ರವರಿಗೆ ಸೇರಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಈ ರೀತಿ ವರ್ತಿಸಿ ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವ ಪ್ರವಾಸಿಗರ ವಿರುದ್ಧ ಹಾಗೂ ಪ್ರವಾಸಿಗರಿಗೆ ಖಾಸಗಿ ಕಾರುಗಳನ್ನು ನೀಡುವ ಕಾರು ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next