Advertisement
ಕಳೆದ ಒಂದು ವರ್ಷದ ಹಿಂದೆ ಯೋಜನೆ ಕಾಮಗಾರಿ ಆರಂಭ ಮಾಡಿದಾಗ ಭವಿಷ್ಯದಲ್ಲಿ ಸ್ಥಳೀಯವಾಗಿ ಕುಡಿಯುವ ನೀರಿನ ಉದ್ದೇಶದ ದೊಡ್ಡ ಸಮಸ್ಯೆ ನಿವಾರಣೆ ಆಗಲಿದೆ ಎಂಬುದಾಗಿ ಭಾವಿಸಲಾಗಿತ್ತು. ಆದರೆ ಕಾಮಗಾರಿ ನಿಧಾನವಾಗಿ ಅನುಷ್ಠಾನ ಆಗುತ್ತಿರುವುದು, ತುರ್ತು ನೆಲೆಯ ಆದ್ಯತೆ ದೊರೆಯದಿರುವುದು ನಿರಾಸೆ ಮೂಡಿಸಿದೆ. ಆದರೂ ಗ್ರಾಮವು ಮುಂದೊಂದು ದಿನ ಬರಮುಕ್ತ ಆಗ ಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾದ ಬಹುಗ್ರಾಮ ಕುಡಿ ಯುವ ನೀರಿನ ನಾಲ್ಕು ಯೋಜನೆಗಳಲ್ಲಿ ನರಿಕೊಂಬು ಗ್ರಾಮದ ಯೋಜನೆ ಪ್ರಥಮ ಆದ್ಯತೆಯಾಗಿದ್ದರೂ ತಾಂತ್ರಿಕ ವಾಗಿ ಎದುರಾಗಿರುವ ತೊಡಕಿನಿಂದ ಅನುಷ್ಠಾನದಲ್ಲಿ ವಿಳಂಬವಾಗಿದೆ. ನೀರು ಸಂಗ್ರಹ ತೊಟ್ಟಿ, ಮೇಲ್‌ರೇಚಕ, ಶುದ್ಧೀಕರಣ ಘಟಕ, ಪೈಪ್‌ಲೈನ್‌ಗಳು ಜೋಡಣೆ ಆಗಿಲ್ಲ. ಸಾಮಗ್ರಿಗಳನ್ನು ತಂದು ರಾಶಿ ಹಾಕಲಾಗಿದೆ ಎನ್ನುವುದು ಎಲ್ಲರಿಗೂ ಎದ್ದು ಕಾಣುವಂತಿದೆ.
Related Articles
Advertisement
ನರಿಕೊಂಬು ಗ್ರಾಮ ಕರ್ಬೆಟ್ಟು ನೇತ್ರಾವತಿ ನದಿ ಕಾಂಕ್ರೀಟ್ ಸೇತುವೆ ಸನಿಹ ಬಹುಗ್ರಾಮ ಕುಡಿ ಯುವ ನೀರಿನ ಯೋಜನೆ ಅನುಷ್ಠಾನ ಆಗುತ್ತಿರುವ ನೀರು ಎತ್ತುವ ಸ್ಥಾವರ, ಮೇಲ್‌ರೇಚಕ ಟ್ಯಾಂಕ್ ಕಾಮಗಾರಿ ಇನ್ನೂ ಪ್ರಗತಿ ಹಂತದಲ್ಲಿ ಇರುವುದ ರಿಂದ ತುರ್ತು ನೀರು ಒದಗಿಸುವ ಯಾವುದೇ ಭರವಸೆ ಇಲ್ಲ. ಪೈಪ್‌ಲೈನ್ ಆಗಿದ್ದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ವಿದ್ಯುತ್ ಸಂಪರ್ಕ ಆಗಿಲ್ಲ. ನೀರೆತ್ತುವ ವಿದ್ಯುತ್ ಮೋಟರ್ ಅಳವಡಿಕೆ ಆಗಿಲ್ಲ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಗ್ರಾಮದ ಜನತೆ ಈ ಬಾರಿಯೂ ಅನುಭವಿಸಬೇಕಾಗಿದೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ಕುಡಿಯುವ ನೀರು ಸಿಗುವಂತಾಗಲಿ ಎಂಬುದು ಫಲಾನುಭವಿಗಳ ಆಶಯ.
ಕುಡಿಯುವ ನೀರಿನ ಸಮಸ್ಯೆಪ್ರಸ್ತುತ ವರ್ಷದಲ್ಲಿ ಕುಡಿಯುವ ನೀರಿನ ಸರಬರಾಜು ಸ್ಥಿತಿ ಗಂಭೀರವಾಗಿದೆ. ಕೆರೆ, ಬಾವಿ, ಕೊಳವೆ ಬಾವಿಗಳಲ್ಲೂ ನೀರು ತಳ ಸೇರಿದೆ. ಆವಶ್ಯಕತೆ ಇರುವ ಕಡೆಗೆ ನೀರು ಒದಗಿಸಲು ಪರ್ಯಾಯವಾಗಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಟ್ಯಾಂಕರ್ ಬಳಕೆ ಮಾಡಲಾಗುತ್ತಿದೆ.
– ಯಶೋಧರ ಕರ್ಬೆಟ್ಟು, ಅಧ್ಯಕ್ಷರು, ನರಿಕೊಂಬು ಗ್ರಾ.ಪಂ. ನೀತಿ ಸಂಹಿತೆ ನಿರ್ಬಂಧ ಇಲ್ಲ
ಚುನಾವಣೆ ನೀತಿ ಸಂಹಿತೆ ಇದ್ದರೂ ಕುಡಿಯುವ ನೀರಿನ ಉದ್ದೇಶದ ಕೆಲಸಕ್ಕೆ ನಿರ್ಬಂಧ ಇರುವುದಿಲ್ಲ. ಸಮಸ್ಯೆ ಎದುರಾದಲ್ಲಿ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬಹುದು. ತುರ್ತು ಸಂದರ್ಭದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಗಮನಕ್ಕೆ ತಂದು ನೀರು
ಒದಗಿಸುವುದಕ್ಕೆ ಅನುದಾನಕ್ಕೂ ಕೊರತೆ ಆಗುವುದಿಲ್ಲ.
– ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಶಾಸಕರು ನೀರಿನ ಮೂಲಗಳು
ನರಿಕೊಂಬು, ಶಂಭೂರು
ಎರಡು ಗ್ರಾಮಗಳ ಒಟ್ಟು
ಜನಸಂಖ್ಯೆ -10,179
ಕೊಳವೆ ಬಾವಿ – 19,
ಟ್ಯಾಂಕ್-11, ಕೆರೆ-7,
ಸರಕಾರಿ ಬಾವಿ-3. – ರಾಜಾ ಬಂಟ್ವಾಳ