Advertisement

ಆಧುನಿಕ ತಂತ್ರಜ್ಞಾನದಿಂದ ಹೆಚ್ಚಿನ ಲಾಭ ಪಡೆಯಿರಿ: ಕಂದಕೂರ

03:26 PM Jun 10, 2022 | Team Udayavani |

ಗುರುಮಠಕಲ್‌: ರೈತರು ಬೆಳೆದರೆ ಮಾತ್ರ ಜಗತ್ತು ಬದುಕಲು ಸಾಧ್ಯ. ಆದರೆ ರೈತರು ಮಾತ್ರ ಸಮಸ್ಯೆಗಳಲ್ಲಿರುವುದು ನೋವಿನ ಸಂಗತಿ. ಹೀಗಾಗಿ ರೈತರು ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಹೆಚ್ಚಿನ ಲಾಭ ಪಡೆದುಕೊಳ್ಳಬೇಕು ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಜರುಗಿದ ಮುಂಗಾರು ಬಿತ್ತನೆ ಬೀಜ ವಿತರಣೆ, ಸಮಗ್ರ ಕೃಷಿ ಅಭಿಯಾನ ಹಾಗೂ ಜಲಾನಯನ ಯೋಜನೆಯಡಿ ಕೋಟಿ ವೃಕ್ಷಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮದು ಮಳೆಯಾಧಾರಿತ ಕೃಷಿ ಪ್ರದೇಶ. ಸರಿಯಾಗಿ ಮಳೆಯಾಗದಿದ್ದರೆ ಬೀಜ, ರಸಗೊಬ್ಬರ, ಕೃಷಿ ಚಟುವಟಿಕೆಗಳಿಗೆ ಮಾಡಿದ ಖರ್ಚು ಎಲ್ಲವೂ ನಷ್ಟವಾಗುತ್ತದೆ. ಬೀಜ, ಗೊಬ್ಬರ, ಖರೀದಿಸುವ ಕುರಿತು ಕೃಷಿ ಇಲಾಖೆಯವರು ರೈತರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಸಹಾಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಶ್ವೇತಾ ತಾಳೆಮರದ ಹಾಗೂ ಅರಣ್ಯ ಇಲಾಖೆ ಎಸಿಎಫ್‌ ಶಿವಶರಣಪ್ಪ ಅವರು ಮಾತನಾಡಿದರು. ಸಾಂಕೇತಿಕವಾಗಿ ವೇದಿಕೆಯ ಮೇಲೆ ರೈತರಿಗೆ ಶಾಸಕರು ಬಿತ್ತನೆ ಬೀಜ ಹಾಗೂ ಸಸಿಗಳನ್ನು ವಿತರಿಸಿದರು.

ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಉಪಾಧ್ಯಕ್ಷೆ ಭೀಮಮ್ಮ ಮುಕುಡಿ, ಕೇದಾರನಾಥ ಹಿರೇಮಠ, ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಅವುಂಟೆ, ಜೆಡಿಎಸ್‌ ಬ್ಲಾಕ್‌ ಅಧ್ಯಕ್ಷ ಪ್ರಕಾಶ ನಿರೇಟಿ, ಎಪಿಎಂಸಿ ಮಾಜಿ ಜಿಲ್ಲಾಧ್ಯಕ್ಷ ಬಸಣ್ಣ ದೇವರಳ್ಳಿ, ಎಪಿಎಂಸಿ ಸದಸ್ಯ ಅನಂತಪ್ಪ ಯದ್ಲಾಪುರ, ಪುರಸಭೆ ಸದಸ್ಯ ಆಶನ್ನ ಬುದ್ದ, ಭೀಮಶಪ್ಪ ಗುಡಿಸೆ ಸೇರಿದಂತೆ ಇತರರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next