Advertisement

ಹಕ್ಕುಗಳನ್ನು ಹೋರಾಟದಿಂದ ಪಡೆದುಕೊಳ್ಳಿ: ಪಂಡಿತರಾವ್‌

06:25 PM Feb 28, 2018 | Team Udayavani |

ಹೊಸಪೇಟೆ: ತಮ್ಮ ಹಕ್ಕುಗಳಿಗಾಗಿ ಕುರಿಗಾರರು, ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಗಿದ್ದು, ಹೋರಾಟದ ಮೂಲಕವೇ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಕುರಿ ಮತ್ತು ಮೇಕೆ ಮಹಾಮಂಡಳ ಅಧ್ಯಕ್ಷ ಪಂಡಿತರಾವ್‌ ಚಿದ್ರಿ ಕರೆ ನೀಡಿದರು.

Advertisement

ನಗರದ ರೈತ ಭವನದಲ್ಲಿ ಮಂಗಳವಾರ ಕರ್ನಾಟಕ ಸಹಕಾರ ಸಂಘಗಳ ಕುರಿ ಮತ್ತು ಮೇಕೆ ಮಹಾಮಂಡಳ ಬೆಂಗಳೂರು
ಹಾಗೂ ಬಳ್ಳಾರಿಯ ಪಶುಪಾಲನಾ ಹಾಗು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಒಂದು ದಿನದ ವೈಜ್ಞಾನಿಕ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುರಿಗಾರರು ತಮ್ಮ ಸಮಸ್ಯೆಗಳಿಗಾಗಿ ಎಲ್ಲಿಯವರೆಗೆ ಧ್ವನಿ ಎತ್ತುವುದಿಲ್ಲವೋ ಅಲ್ಲಿಯವರೆಗೆ ತಮ್ಮ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಕುರಿಗಳಿಗೆ ತಗಲುವ ರೋಗಗಳಿಗೆ ಲಸಿಕೆ ಹಾಕಿಸುವಲ್ಲಿ ತೊಂದರೆ ಹಾಗೂ ಲಸಿಕೆ ಸಿಗದೇ ಕುರಿ ಸತ್ತಾಗ ಪರಿಹಾರ ಪಡೆಯುವಲ್ಲಿ ತೊಂದರೆ ಎದುರಿಸುವಂತಾಗಿದೆ. ಕುರಿಗಾರರಿಗೆ
ತೊಂದರೆಯಾದಾಗ ಧ್ವನಿ ಎತ್ತಿ ಸೌಲಭ್ಯ ಪಡೆದುಕೊಳ್ಳುವಂತಾಗಬೇಕು ಎಂದರು. ನಿಗಮದ ಅಧ್ಯಕ್ಷರಾದ ಅವಧಿಯಲ್ಲಿ 600
ಕುರಿ ಮತ್ತು ಮೇಕೆ ಸಹಕಾರ ಸಂಘಗಳನ್ನು ರಚನೆ ಮಾಡಿದ್ದೇನೆ. ಪ್ರತಿ ಹೋಬಳಿಗೆ ಒಂದು ಸೊಸೈಟಿ ಮಾಡಿ ಎಲ್ಲವನ್ನು ಸೇರಿಸಿ ಒಂದು ಮಹಾ ಮಂಡಳ ರಚನೆ ಮಾಡಿದೆ. ಪಶು ಸಂಗೋಪನಾ ಇಲಾಖೆಯಲ್ಲಿ ಮೀನು, ಕೋಳಿ, ಹಸು ಹೀಗೆ ಪ್ರತಿಯೊಂದಕ್ಕೂ ಒಂದೊಂದು ಮಹಾಮಂಡಳಿ ಇದೆ. ಕುರಿ ಮತ್ತು ಮೇಕೆ ಮಹಾಮಂಡಳಿಯನ್ನು ನಾನು ರಚನೆ ಮಾಡಿದೆ ಎಂದರು.

ಕುರಿ ಮತ್ತು ಮೇಕೆ ಮಹಾಮಂಡಳಿಗೆ 5ಕೋಟಿ ಅನುದಾನವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಕುರಿಗಾರರಿಗೆ 4 ಕಸಾಯಿಖಾನೆ ತೆರೆಯಲು ಬಜೆಟ್‌ನಲ್ಲಿ 30 ಕೋಟಿ ಅನುದಾನ ನೀಡಿದ್ದಾರೆ. ಕುರಿಗಾರರು ಆರ್ಥಿಕವಾಗಿ ಸಬಲರಾಗಬೇಕಾದರೆ ಸೊಸೈಟಿ
ಮುಖಾಂತರ ಮಾಂಸ ಮಾರಾಟ ಮಾಡಬೇಕು. ಸರ್ಕಾರ 200 ಮಾಂಸ ಮಾರಾಟ ಸೊಸೈಟಿ ತೆರೆಯಲು ಅವಕಾಶ ನೀಡಿದೆ. ಪ್ರತಿ ಸೊಸೈಟಿಗೆ 1ಲಕ್ಷ ಸಹಾಯಧನ ನೀಡಲಾಗುತ್ತದೆ. ಇದರ ಸದುಪಯೋಗವನ್ನು ಕುರಿಗಾರರು ಪಡೆದುಕೊಳ್ಳಬೇಕು ಎಂದರು.

ಆಂಧ್ರ, ತೆಲಂಗಾಣ ರಾಜ್ಯದಲ್ಲಿ ಕುರಿಗಾರರಿಗೆ  ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ಅನುದಾನ ತಂದಿದ್ದಾರೆ. ಆದರೆ ಅವರಿಗೆ ರಾಜ್ಯ ಸರ್ಕಾರದಿಂದ ಜಾಮೀನು ನೀಡಬೇಕು. ಈ ಕುರಿತು ಸಿಎಂ ಅವರಲ್ಲಿ ಮನವಿ ಮಾಡಿದಾಗ ಅವರು ಸ್ಪಂಧಿಸಿ ಬಜೆಟ್‌ನಲ್ಲಿ 187 ಕೋಟಿ ಅನುದಾನ ನೀಡಿದ್ದಾರೆ. ಈಗ ನಾವು ಮಹಾಮಂಡಳಿ ವತಿಯಿಂದ ಕುರಿಗಾರರಿಗೆ ನೇರವಾಗಿ ಸಾಲ ಸೌಲಭ್ಯ ನೀಡುತ್ತೇವೆ
ಎಂದರು.

ಕುರಿ ಮತ್ತು ಮೇಕೆ ಸಹಕಾರ ಮಹಾಮಂಡಳ ಬಳ್ಳಾರಿ-ದಾವಣಗೆರೆ ವಲಯ ನಿರ್ದೇಶಕ ಡಾ| ಎಂ.ಮಾರ್ತಾಂಡಪ್ಪ ಮಾತನಾಡಿ, ಕೆಎಂಎಫ್ ಮಾದರಿಯಲ್ಲೇ ಕುರಿ ಮತ್ತು ಮೇಕೆ ಪರಿಷ್ಕೃತ ಮಾಂಸ ಮಾರಾಟ ಮಹಾಮಂಡಳಿ ರಚನೆ ಮಾಡಲಾಗುವುದು. ಈ ಕುರಿತು ಮಾ. 1ರಂದು ಮಹಾಮಂಡಳಿಯ ಸಭೆ ನಡೆಯಲಿದೆ. ಕುರಿಗಾರರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.

Advertisement

ತರಬೇತಿ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಚಿದಾನಂದಪ್ಪ, ರೈತ ಸಂಘದ ಅಧ್ಯಕ್ಷ ಗೋಸಲ ಭರಪ್ಪ, ಕೆ.ಸೋಮಲಿಂಗಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಪೊ›| ಜಯದೇವಪ್ಪ, ಡಾ| ಎಚ್‌.ನಾಗರಾಜ , ಡಾ| ಎನ್‌.ನಾಗರಾಜ
ಸೇರಿದಂತೆ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next