Advertisement

ಹಲವು ವರ್ಷಗಳಿಂದ ಸಂಗ್ರಹಗೊಂಡಿದ್ದ ತ್ಯಾಜ್ಯ ರಾಶಿಗೆ ಮುಕ್ತಿ

04:05 PM May 24, 2023 | Team Udayavani |

ಸುಳ್ಯ: ಸುಳ್ಯ ನಗರ ಪಂಚಾಯತ್‌ ವಠಾರದ ಶೆಡ್‌ನ‌ಲ್ಲಿ ವಿವಿಧ ಕಾರಣಗಳಿಂದ ಹಲವು ವರ್ಷಗಳಿಂದ ಸಂಗ್ರಹಗೊಂಡು ವಿವಿಧ ವಿದ್ಯಮಾನಗಳಿಗೆ ಕಾರಣವಾಗಿದ್ದ ಕಸದ ರಾಶಿಯ ತೆರವು ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಅಂದುಕೊಂಡಂತೆ ನಡೆದಲ್ಲಿ ಮೇ ಅಂತ್ಯದ ವೇಳೆಗೆ ಶೆಡ್‌ನ‌ ತ್ಯಾಜ್ಯ ರಾಶಿ ಸಂಪೂರ್ಣವಾಗಿ ತೆರವಾಗಲಿದೆ.

Advertisement

ಇಲ್ಲಿನ ತ್ಯಾಜ್ಯದ ಸಮಸ್ಯೆ ರಾಜಕೀಯವಾಗಿಯೂ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಸುಳ್ಯ ನ.ಪಂ. ವ್ಯಾಪ್ತಿಯಲ್ಲಿ ಸಂಗ್ರಹಗೊಂಡ ತ್ಯಾಜ್ಯವನ್ನು ತಾಲೂಕಿನ ಇತರ ಕಡೆ ವಿಲೇವಾರಿ ಮಾಡುವ ಕಾರ್ಯಕ್ಕೆ ಜಾಗ ಹುಡುಕಾಟ ನಡೆದರೂ ಅದು ಫ‌ಲ ನೀಡಿರಲಿಲ್ಲ.

ನ.ಪಂ. ವಠಾರದಲ್ಲೇ ಶೇಖರಣೆ
ಕಸ ವಿಲೇವಾರಿಗೆ ಸೂಕ್ತ ಜಾಗ ಸಿಗದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ನ.ಪಂ. ವಠಾರದಲ್ಲಿ ಕಸವನ್ನು ಶೇಖರಣೆ ಮಾಡುತ್ತಾ ಬರಲಾಗಿತ್ತು. ಇದು ಮುಂದುವರಿದು, ಶೆಡ್‌ ಭರ್ತಿಗೊಂಡ ಸಂದರ್ಭದಲ್ಲಿ ಇತರ ಪ್ರದೇಶದಲ್ಲೂ ಕಸ ಶೇಖರಣೆ ಮಾಡಲಾಗಿತ್ತು. ಆದರೆ ಸಂಗ್ರಹಗೊಂಡ ಕಸ ತೆರವಿಗೆ ಮುಂದಾಗದೆ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಸುಳ್ಯದ ಕಸದ ಸಮಸ್ಯೆ ಬಗ್ಗೆ ಕಳೆದ ಮೇ ನಲ್ಲಿ ಚಿತ್ರನಟ ಅನಿರುದ್ಧ್ ಕೂಡ ಧ್ವನಿ ಎತ್ತಿದ್ದರು. ಆ ಬಳಿಕ ಕಸದ ವಿಚಾರದಲ್ಲಿ ಆರೋಪ- ಪ್ರತ್ಯಾರೋಪ, ಪ್ರತಿಭಟನೆಗಳಿಗೆ ಕಾರಣವಾಗಿತ್ತು.

ತೆರವು ಕಾರ್ಯ
ಸುಳ್ಯದ ಕಸದ ಸಮಸ್ಯೆ ವಿವಾದ ಸೃಷ್ಟಿಸುತ್ತದೆ ಎನ್ನುತ್ತಲೇ ಕಳೆದ ಮೇ ಅಂತ್ಯದ ವೇಳೆಗೆ ಕಸ ತೆರವಿನ ಟೆಂಡರ್‌ ಪ್ರಕ್ರಿಯೆ ನಡೆದು ತೆರವು ಕಾರ್ಯ ಆರಂಭಿಸಲಾಗಿತ್ತು. ಮೊದಲ ಹಂತದಲ್ಲಿ ಸುಮಾರು 17 ಲೋಡ್‌ ನಲ್ಲಿ ಅಂದಾಜು 250 ಟನ್‌ ಕಸ ಇಲ್ಲಿಂದ ತೆರವು ಮಾಡಿ ಬೇರೆಡೆಗೆ ರವಾನಿಸಲಾಗಿತ್ತು. ಎರಡನೇ ಹಂತದಲ್ಲಿ 44 ಲೋಡ್‌ ಕಸ ಸಾಗಿಸಲಾಗಿತ್ತು.

ಅಂತಿಮ ಹಂತದಲ್ಲಿ ಪ್ರಸ್ತುತ ನಗರ ಪಂಚಾಯತ್‌ ವಠಾರದ ಕಸದ ರಾಶಿ ತೆರವು ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಇನ್ನು ಕೇವಲ ಎರಡು ಮೂರು ಲೋಡ್‌ನ‌ಷ್ಟು ಕಸ ತೆರವಾಗಲು ಬಾಕಿಯಿದೆ. ಕಸ ತೆರವಿಗೆ 60 ಲಕ್ಷ ರೂ. ಅನುದಾನಕ್ಕೆ ನ.ಪಂ. ವತಿಯಿಂದ ಸರಕಾರಕ್ಕೂ ಕೇಳಲಾಗುತ್ತದೆ ಎಂದು ನಗರ ಪಂಚಾಯತ್‌ ಮೂಲವು ತಿಳಿಸಿದ್ದು ಈವರೆಗೆ ನ.ಪಂ. ಸ್ವಂತ ಅನುದಾನವನ್ನೇ ಪಾವತಿಸಲಾಗಿದೆ ಎನ್ನಲಾಗಿದೆ.

Advertisement

ಕಸದ ತೆರವು ಕಾರ್ಯದಲ್ಲಿ ಕೆಲವೊಂದು ಸಮಸ್ಯೆಗಳಿಂದ ತೆರವು ಪೂರ್ಣಗೊಳ್ಳಲು ತಡವಾಗಿದೆ. ಶೆಡ್‌ ಹಾಗೂ ಇತರೆಡೆ ಸಂಗ್ರಹಗೊಂಡ ಕಸದ ಬಗ್ಗೆ ಲೆಕ್ಕಾಚಾರದಲ್ಲಿ ಸ್ಪಷ್ಟನೆ ಸಿಕ್ಕದೆ ಹಿನ್ನಡೆಯಾಗಿತ್ತು. ಒಟ್ಟಿನಲ್ಲಿ ನ.ಪಂ.ನವರ ಪ್ರಯತ್ನದಿಂದ ಇಂದು ಕಸ ತೆರವು ಅಂತಿಮ ಹಂತದಲ್ಲಿದೆ.

ಮುಂದೆ ಏನು
ಶೆಡ್‌ನ‌ಲ್ಲಿ ಸಂಗ್ರಹಗೊಂಡ ಕಸ ಪೂರ್ಣವಾಗಿ ತೆರವುಗೊಂಡ ಬಳಿಕ ಒಂದು ಹಂತದ ಸಮಸ್ಯೆ ಪರಿಹಾರ ಗೊಳ್ಳಲಿದೆ. ಮುಂದೆ ಪ್ರತಿದಿನ ಸಂಗ್ರಹಗೊಂಡ ಕಸ ವನ್ನು ಕಲ್ಚಪೆì ವಿಲೇವಾರಿ ಘಟಕಕ್ಕೆ ಸಾಗಿಸಿ ಅಲ್ಲಿ ಬರ್ನ್ ಮಾಡುವುದು ಹಾಗೂ ಹಸಿ ಕಸವನ್ನು ಗೊಬ್ಬರ ಮಾಡ ಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲವೇ ದಿನದಲ್ಲಿ ತೆರವು
ಸುಳ್ಯ ನ.ಪಂ. ವಠಾರದ ಶೆಡ್‌ನ‌ ಕಸ ಬಹುತೇಕ ತೆರವು ಮಾಡಿ ಸಾಗಿಸಲಾಗಿದೆ. ಇನ್ನುಳಿದಿರುವ ಕಸ ಕೆಲವೇ ದಿನಗಳಲ್ಲಿ ತೆರವುಗೊಳ್ಳಲಿದೆ.
-ಸುಧಾಕರ್‌, ಮುಖ್ಯಾಧಿಕಾರಿ ನ.ಪಂ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next