Advertisement

“Udayavani’ ಕೃಷ್ಣಾಷ್ಟಮಿ ಫೋಟೋ ಸ್ಪರ್ಧೆಗೆ ಸಿದ್ಧರಾಗಿ

01:57 AM Aug 17, 2024 | Team Udayavani |

ಮಣಿಪಾಲ: ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಇಡೀ ಕೃಷ್ಣನಗರಿಯಲ್ಲಿ ಸಂಭ್ರಮ ಸಡಗರ. “ಉದಯವಾಣಿ’ ಯಶೋದಾ ಕೃಷ್ಣ ಫೋಟೋ ಸ್ಪರ್ಧೆ ಈ ಸಡಗರವನ್ನು ಇನ್ನಷ್ಟು ಹೆಚ್ಚಿಸಲಿದೆ.

Advertisement

ಶ್ರೀ ಕೃಷ್ಣ ಅವತರಿಸಿದ ದಿನದಂದು ಲೀಲಾವಿನೋದವನ್ನು ಸಾರಲು ಶ್ರೀ ಕೃಷ್ಣಮಠದ ಸಹಿತ ಎಲ್ಲೆಡೆ ಈಗಾಗಲೇ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮಕ್ಕೆ ತಯಾರಿಗಳು ಆರಂಭಗೊಂಡಿವೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಯಶೋದೆ ಮತ್ತು ಬಾಲಕೃಷ್ಣನ ಲೀಲೆಗಳೇ ಹೆಚ್ಚು ಅಪ್ಯಾಯಮಾನ. ಈ ಅವಿನಾಭಾವ ಸಂಬಂಧವನ್ನು ನಿರೂಪಿಸಿ ಸ್ಪರ್ಧೆಯಲ್ಲಿ ಬಹುಮಾನ ಗೆಲ್ಲುವ ಕ್ಷಣ ಮತ್ತೆ “ಉದಯವಾಣಿ’ ಮೂಲಕ ಬಂದಿದೆ.

ಹಬ್ಬವೆಂದರೆ ಮಹಿಳೆಯರಲ್ಲಿ ಪಾಲ್ಗೊಳ್ಳುವಿಕೆ, ಉತ್ಸಾಹ, ಅಭಿರುಚಿ, ಆಸಕ್ತಿ ಎಲ್ಲವೂ ಇರುತ್ತದೆ. ಮನೆಯಲ್ಲಿ ಸಿಹಿ ತಿನಿಸು, ಬಗೆ ಬಗೆಯ ಖಾದ್ಯ, ಅಷ್ಟಮಿಗೆ ಉಂಡೆ, ಚಕ್ಕುಲಿ ಮಾಡುವು ದರಲ್ಲೇ ಹಬ್ಬ ಕಳೆದು ಹೋಗದಿರಲಿ. ಅಷ್ಟಮಿಯ ಸವಿ ವರ್ಷಪೂರ್ತಿ ಇರಬೇಕು.

ಈ ಕಾರಣದಿಂದಲೇ ಹಬ್ಬದ ಸಂಭ್ರಮ ಹೆಚ್ಚಿಸಲು “ಉದಯವಾಣಿ’ ಯು ಪ್ರತೀ ವರ್ಷದಂತೆ ಈ ವರ್ಷವೂ ಪ್ರತಿಷ್ಠಿತ ಯಶೋದಾ ಕೃಷ್ಣ ಫೋಟೋ ಸ್ಪರ್ಧೆ-2024 ಏರ್ಪಡಿಸಲಿದೆ.

ಯಶೋದಾ ಮತ್ತು ಕೃಷ್ಣರ ಬಾಂಧವ್ಯ ಇತರ ಎಲ್ಲ ಬಾಂಧವ್ಯಗಳಿಗಿಂತಲೂ ಮಿಗಿಲಾಗಿದ್ದು, ಈ ವರ್ಣಿಸಲು ಅಸಾಧ್ಯವಾದ ಅನುಬಂಧವನ್ನು ಚಿತ್ರದ ಮೂಲಕ ಕಟ್ಟಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಿ.

Advertisement

ಕಳೆದ ವರ್ಷ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಯ ಸಾವಿರಾರು ತಾಯಿ ಮತ್ತು ಮಗು ಯಶೋದೆ ಮತ್ತು ಕೃಷ್ಣರನ್ನು ಬಿಂಬಿಸುವ ಉಡುಗೆ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಈ ಬಾರಿ ಮತ್ತೊಮ್ಮೆ ಯಶೋದೆ ಮತ್ತು ಕೃಷ್ಣನಾಗಲು ಕೂಡಲೇ ತಯಾರಿ ನಡೆಸಿ. ಸ್ಪರ್ಧೆಯ ನಿಯಮಾವಳಿಗಳನ್ನು ಶೀಘ್ರವೇ ಪ್ರಕಟಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next