Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧರಾಗಿ: ಸಚಿವ

03:50 PM May 07, 2020 | Team Udayavani |

ಕೊಳ್ಳೇಗಾಲ: ವದಂತಿಗಳಿಗೆ ಕಿವಿಗೊಡದೆ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಿದ್ಧರಾಗಬೇಕು ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ ವಿದ್ಯಾರ್ಥಿಗಳಿಗೆ ಹೇಳಿದರು.

Advertisement

ಪಟ್ಟಣದ ವಿವಿಧ ಬಡಾವಣೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವರು, ಜೂನ್‌ 2ನೇ ವಾರದಲ್ಲಿ ಪರೀಕ್ಷೆ ಆರಂಭವಾಗಲಿದೆ. ವಿದ್ಯಾರ್ಥಿಗಳು ದೂರದರ್ಶನದಲ್ಲಿ ಪ್ರಕಟವಾಗುತ್ತಿರುವ ಪಾಠಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಮುಂದಿನ ದಿನಗಳು ಹಿಂದಿ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಸವಿವರ ಮಾಹಿತಿ ನೀಡಲಾಗುವುದು. ಇದನ್ನು ಸಂಪೂರ್ಣ ಬಳಕೆ ಮಾಡಿಕೊಂಡು ಪರೀಕ್ಷೆ ಬರೆದು ಉತ್ತಮ ಫ‌ಲಿತಾಂಶ ತಂದುಕೊಡಬೇಕು ಎಂದರು. ಪಟ್ಟಣದ ಮುಡಿಗುಂಡ ಬಡಾವಣೆಯಲ್ಲಿ ಸಮೂಹ ಶೌಚಾಲಯ ಹದಗೆಟ್ಟಿದ್ದು ಸುಸಜ್ಜಿತ ಶೌಚಾಲಯ ನಿರ್ಮಿಸಿಕೊಡಬೇಕೆಂದು ಬಡಾವಣೆಯ ನಿವಾಸಿಗಳು ಮನವಿ ಮಾಡಿದರು.

ನಗರಸಭಾ ಸದಸ್ಯೆ ಪುಷ್ಪಾಶಾಂತರಾಜು ಮಾತನಾಡಿ, ನಗರಸಭೆಯಿಂದ ಎಷ್ಟೇ ಸ್ವತ್ಛತೆ ಮಾಡಿದರೂ ಜನರು ಸ್ವತ್ಛತೆ ಕಾಪಾಡಿಕೊಳ್ಳುತ್ತಿಲ್ಲ ಎಂದು ಹೇಳಿದರು. ಎಲ್ಲಾ ಮಾಹಿತಿಗಳನ್ನು ಅರಿತ ಸಚಿವರು ಕೂಡಲೇ ಶೌಚಾಲಯವನ್ನು ಅಭಿವೃದ್ಧಿಪಡಿಸಿ ಹಣ ಕೊಟ್ಟು ಬಳಕೆ ಮಾಡಿಕೊಳ್ಳುವಂತೆ ಸ್ಥಳದಲ್ಲಿ ಇದ್ದ ಪೌರಾಯುಕ್ತ ನಾಗಶೆಟ್ಟಿ ಅವರಿಗೆ ಸೂಚಿಸಿದರು.

ಸಚಿವರ ಭೇಟಿ ವೇಳೆ ಶಾಸಕ ಮಹೇಶ್‌, ಜಿಪಂ ಸಿಇಒ ನಾರಾಯಣರಾವ್‌, ತಹಶೀಲ್ದಾರ್‌ ಕುನಾಲ್‌, ಡಿವೈಎಸ್ಪಿ ನವೀನ್‌ಕುಮಾರ್‌, ಸಿಪಿಐ ಶ್ರೀಕಾಂತ್‌, ಎಸ್‌ಐ ರಾಜೇಂದ್ರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next