Advertisement

Panchayat Election ಸಮರಕ್ಕೆ ಸಿದ್ಧರಾಗಿ: ಡಿಸಿಎಂ ಡಿಕೆಶಿ ಹೇಳಿದ್ದೇನು?

12:21 AM Jul 21, 2024 | Team Udayavani |

ಬೆಂಗಳೂರು: ಯಾವುದೇ ಕ್ಷಣದಲ್ಲಾ ದರೂ ಪಂಚಾಯತ್‌ ಚುನಾವಣೆ ನಡೆಯಬಹುದು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಜ್ಜಾಗಬೇಕಿದೆ. ಬ್ಲಾಕ್‌ ಮಟ್ಟದಲ್ಲಿ ಪಕ್ಷದ ಪುನಾರಚನೆ ಮಾಡಬೇಕಿದೆ. ನಿಷ್ಕ್ರಿಯರಾಗಿರುವವರನ್ನು ಖಡಾ ಖಂಡಿತವಾಗಿ ಬದಲಾವಣೆ ಮಾಡಲಾಗುವುದು ಎಂದು ಹೇಳಿರುವ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸರಕಾರಿ ಸಮಿತಿಗಳಲ್ಲಿ ನಾಮನಿರ್ದೇಶನ ವಿಚಾರ ದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದಿದ್ದಾರೆ.

Advertisement

ಶನಿವಾರ ಕೆಪಿಸಿಸಿಯ ಭಾರತ್‌ ಜೋಡೋ ಭವನದಲ್ಲಿ ಜಿಲ್ಲಾ ಮತ್ತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಸಭೆ ನಡೆಸಿದ ಅವರು, ಜಿಲ್ಲಾ ಮತ್ತು ತಾ.ಪಂ. ಚುನಾವಣೆಗೆ ನ್ಯಾಯಾಲಯ ಯಾವಾಗ ಬೇಕಿದ್ದರೂ ಸೂಚನೆ ನೀಡಬಹುದು. ಹೀಗಾಗಿ ಕೂಡಲೇ ಸಿದ್ಧರಾಗಿ ಎಂದು ಕರೆ ನೀಡಿದರು.

ಪಕ್ಷದಲ್ಲಿ ಕೆಲವರಿಗೆ ಭಡ್ತಿ
ಬ್ಲಾಕ್‌ ಮಟ್ಟದಿಂದ ಪಕ್ಷವನ್ನು ಬಲಗೊಳಿಸಬೇಕಿದೆ. ಅಧ್ಯಕ್ಷರು ಬಹಳ ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕಿದೆ. ಕೆಲವರಿಗೆ ಭಡ್ತಿ ನೀಡಬೇಕು. ಮತ್ತೆ ಕೆಲವರಿಗೆ ಜವಾಬ್ದಾರಿ ನೀಡಬೇಕಿದೆ ಎಂದರು.

ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡ ಲಾಗುವುದು. ಈ ಎಲ್ಲ ವಿಚಾರಗಳನ್ನು ಚರ್ಚೆ ಮಾಡಿ, ಮಾರ್ಗದರ್ಶನ ನೀಡಲಾಗಿದೆ. ಕಾರ್ಯೋ ನ್ಮುಖರಾಗದೆ ಇರುವವರನ್ನು ಖಂಡಿತವಾಗಿ ಬದಲಾಯಿಸಲಾಗುವುದು. ಇತ್ತೀಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ನಾನು ಈ ವಿಚಾರ ಹೇಳಿದ್ದೇನೆ. ಶಾಸಕರ ಮನೆಯಲ್ಲಿ ಕಾರ್ಯಕರ್ತರ ಭೇಟಿ ಆಗಲಿ. ಆದರೆ ಸಭೆಗಳು ಮಾತ್ರ ಪಕ್ಷದ ಕಚೇರಿಯಲ್ಲೇ ಆಗಬೇಕು. ಇಲ್ಲದಿದ್ದರೆ ಸಮುದಾಯ ಭವನದಲ್ಲಿ ಮಾಡಲಿ. ಶಾಸಕರ ಮನೆಯಲ್ಲಿ ಮಾತ್ರ ಮಾಡುವಂತಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಸೂಚಿಸಿದರು.

ಕಾರ್ಯಕರ್ತರಿಗೆ ಆದ್ಯತೆ
ಎಲ್ಲ ಕಡೆಗಳಲ್ಲಿ ಸಮಿತಿಗಳ ರಚನೆಗೆ ಸೂಚನೆ ನೀಡಲಾಗಿದೆ. ವಿವಿಧ ಸರಕಾರಿ ಸಮಿತಿಗಳ ನಾಮ ನಿರ್ದೇಶನ ವಿಷಯದಲ್ಲಿ ಕಾಂಗ್ರೆಸ್‌ ಕಾರ್ಯ ಕರ್ತರಿಗೆ ಮಾತ್ರ ಅವಕಾಶ ನೀಡಲಾಗುವುದು ಹಾಗೂ ಸಾಮಾಜಿಕ ನ್ಯಾಯದ ಮಾನದಂಡ ಆಧಾರದ ಮೇಲೆ ಮಾಡಲಾಗುವುದು. ನಿಗಮ ಮಂಡಳಿ ಸದಸ್ಯರು, ನಿರ್ದೇಶಕರ ನೇಮಕ ವಿಚಾರವಾಗಿ ಗೃಹಸಚಿವ ಡಾ| ಪರಮೇಶ್ವರ್‌ ನೇತೃತ್ವದಲ್ಲಿ ದೊಡ್ಡ ಸಮಿತಿ ರಚಿಸಲಾಗಿದೆ. ಅದರಲ್ಲಿ ಪಕ್ಷದವರಿಗೂ ಅವಕಾಶ ಕೊಡಲಾಗಿದೆ, ಸರಕಾರದವರೂ ಇದ್ದಾರೆ. ಹಳ್ಳಿಗಳಲ್ಲಿ ಬಲಿಷ್ಠವಾಗಿರುವ ಕಾರ್ಯಕರ್ತರನ್ನು ಗಮನಿಸಬೇಕು ಎಂದು ಸಮಿತಿಗೆ ನಿರ್ದೇಶನ ನೀಡಿದ್ದೇವೆ ಎಂದು ತಿಳಿಸಿದರು.

Advertisement

ಡಿಕೆಶಿ ಹೇಳಿದ್ದೇನು?
ಸರಕಾರಿ ಸಮಿತಿಗಳ ನಾಮನಿರ್ದೇಶನಕ್ಕೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಅವಕಾಶ
ಬ್ಲಾಕ್‌ ಮಟ್ಟದಲ್ಲಿನ ನಿಷ್ಕ್ರಿಯರಿಗೆ ಜಾಗ ಇಲ್ಲ, ಬದಲಾವಣೆ ಖಚಿತ
ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದವರಿಗೆ ಭಡ್ತಿ
ಕಾರ್ಯಕರ್ತರ ಭೇಟಿ ಶಾಸಕರ ಮನೆಯಲ್ಲೇ ಆಗಲಿ

Advertisement

Udayavani is now on Telegram. Click here to join our channel and stay updated with the latest news.

Next