Advertisement

ಕೆಎಸ್‌ಆರ್‌ಟಿಸಿ ಟಿಕೆಟ್‌ ಬ್ಲಾಕ್‌ನಲ್ಲಿ ಬಿಕರಿ

12:10 PM Nov 23, 2017 | Team Udayavani |

ಬೆಂಗಳೂರು: ಕೆಎಸ್‌ಆರ್‌ಟಿಸಿ ಜಾರಿಗೊಳಿಸಿದ “ಇ-ಟಿಕೆಟ್‌’ ವ್ಯವಸ್ಥೆಯಡಿ ಫ್ರಾಂಚೈಸಿಗಳೇ ಎಲ್ಲ ಟಿಕೆಟ್‌ಗಳನ್ನು ಬೇನಾಮಿ ಹೆಸರಿನಲ್ಲಿ ಕಾಯ್ದಿರಿಸಿ, ಪ್ರಯಾಣಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.

Advertisement

ಮುಂಗಡ ಟಿಕೆಟ್‌ ಕಾಯ್ದಿರಿಸುವ ಕಾರ್ಯಕ್ಕಾಗಿ ಕೆಎಸ್‌ಆರ್‌ಟಿಸಿಯಿಂದ ನೇಮಕಗೊಂಡ ವೆಲ್ಲೂರಿನ ಫ್ರಾಂಚೈಸಿಯೊಂದು ತಾನೇ ಮುಂಚಿತವಾಗಿ ಎಲ್ಲ ಟಿಕೆಟ್‌ ಗಳನ್ನು ಕಾಯ್ದಿರಿಸಿ, ನಂತರ ಅವುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿತ್ತು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಭದ್ರತಾ ಮತ್ತು ಜಾಗೃತ ವಿಭಾಗದ ಅಧಿಕಾರಿಗಳು ತನಿಖೆ ನಡೆಸಿದಾಗ, ಅಕ್ರಮ ನಡೆಯುತ್ತಿರು ವುದು ಪತ್ತೆಯಾಗಿದೆ.

ಒಂದೇ ಕೌಂಟರ್‌ನಿಂದ ಅತಿ ಹೆಚ್ಚು ಟಿಕೆಟ್‌ ಬುಕಿಂಗ್‌ ಆಗುತ್ತಿತ್ತು. ದೂರಿನ ಮೇರೆಗೆ ಇದನ್ನು ಪರಿಶೀಲಿಸಿದಾಗ, ಸುಮಾರು 12 ಟಿಕೆಟ್‌ಗಳನ್ನು ಕೆಎಸ್‌ಆರ್‌ಟಿಸಿಯಿಂದ ಫ್ರ್ಯಾಂಚೈಸಿ ಪಡೆದ ಖಾಸಗಿ ವ್ಯಕ್ತಿಯೇ ಬೇನಾಮಿ ಹೆಸರಿನಲ್ಲಿ ಬ್ಲಾಕ್‌ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮುಂಗಡ ಟಿಕೆಟ್‌ ಕಾಯ್ದಿರಿಸುವ ಕೌಂಟರ್‌ಗಳಲ್ಲಿ ಕ್ರಮವಾಗಿ ಟಿಕೆಟ್‌ಗಳನ್ನು ಬೇನಾಮಿ ಹೆಸರಿನಲ್ಲಿ ಕಾಯ್ದಿರಿಸಿ, ಪ್ರಯಾಣಿಕರಿಗೆ ಅನನುಕೂಲ ಉಂಟುಮಾಡುವ ಮತ್ತು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಟಿಕೆಟ್‌ ಮಾರಾಟ ಮಾಡುತ್ತಿರುವುದು ಕಂಡುಬಂದರೆ, ಸಾರ್ವಜನಿಕರು awatar@ksrtc.org ವೆಬ್‌ಸೈಟ್‌ ಅಥವಾ ಮೊ: 7760990034/ 77609 90035 ಕರೆ ಮಾಡಿ ದೂರು ದಾಖಲಿಸಬೇಕು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next