ವಾಗುವ ಎಲ್ಲ ಸಾಧ್ಯತೆಗಳಿವೆ. ಏಕೆಂದರೆ ಕೇಂದ್ರ ಸರಕಾರವು ಫೋನ್‌ಗಳ ಡಿಸ್‌ಪ್ಲೇ, ಟಚ್ ಪ್ಯಾನೆಲ್‌ಗಳ ಆಮದು ಮೇಲೆ ಶೇ. 10ರಷ್ಟು ಸುಂಕ ವಿಧಿಸಲು ತೀರ್ಮಾನಿಸಿದೆ. ಫೋನ್ ಉತ್ಪಾದಕರು ಆ ವೆಚ್ಚವನ್ನು ನೇರವಾಗಿ ಗ್ರಾಹಕರ ಮೇಲೆ ವರ್ಗಾಯಿಸಲಿರುವುದರಿಂದ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಏರಿಕೆ ಉಂಟಾಗಲಿದೆ.
Advertisement
ಸುಂಕ ಶೇ.10ರಷ್ಟು ಹೆಚ್ಚಳವಾದರೂ ಫೋನ್‌ಗಳ ಬೆಲೆಯಲ್ಲಿ ಶೇ. 1.5ರಿಂದ ಶೇ. 5ರಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. “ಆತ್ಮನಿರ್ಭರ ಭಾರತ’ ಅನ್ವಯ ಸ್ಥಳೀಯ ಉತ್ಪಾದಕರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಂತಹಂತವಾಗಿ ಉತ್ಪಾದನೆ (ಪಿಎಂಪಿ) ಯೋಜನೆಯಡಿ ದೇಶದಲ್ಲಿಯೇ ಹೆಚ್ಚು ಮೊಬೈಲ್ ಫೋನ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಫೋನ್ ಆಮದುದಾರರ ಮೇಲೆ ಶೇ.11 ರಷ್ಟು ಹೆಚ್ಚುವರಿಯಾಗಿ ಸುಂಕದ ಹೊರೆ ಅನುಭವಿಸುವಂತಾಗಲಿದೆ.