ಜರ್ಮನಿ: ಮಹಾಮಾರಿ ಕೋವಿಡ್-19 ಅನ್ನು ತಡೆಗಟ್ಟಲು ಕಟ್ಟುನಿಟ್ಟಿನ ಲಾಕ್‌ಡೌನ್ ಹಾಗೂ ಸಾಮಾಜಿಕ ಅಂತರ ನೀತಿ ಜಾರಿಯಲ್ಲಿದ್ದರೂ ಜರ್ಮನಿಯ ಶುಯೆಟಾxಫ್ì ನಗರದ ಜನರು, ತಮ್ಮ ಕಾರುಗಳನ್ನು ಕಾರ್ ಡಿಸ್ಕೋ ಪಾರ್ಟಿಗೆ ತಂದು ಕುಣಿದಿದ್ದಾರೆ.
ಜರ್ಮನಿಯ ಅತಿದೊಡ್ಡ ಡಿಸ್ಕೋ ಕಂಪನಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಪಾರ್ಟಿ ಆಯೋಜಿಸಿದ್ದ ಸ್ಥಳಕ್ಕೆ ನೂರಾರು ಕಾರುಗಳು ಬಂದಿವೆ. ಪ್ರತ್ಯೇಕವಾಗಿ ಕಾರುಗಳಿಗಾಗಿಯೇ ಆಯೋಜಿಸಿದ್ದ ಈ ಕಾರ್ ಡಿಸ್ಕೋ ಪಾರ್ಟಿಯಲ್ಲಿ ಸತತ ಮೂರು ಗಂಟೆಗಳ ನಡೆದ ನೇರ ಸಂಗೀತ ಕಾರ್ಯಕ್ರಮ ವೀಕ್ಷಿಸಿದ ಜನರು ತಮ್ಮ ಕಾರೊಳಗೇ ಕುಣಿದು ಕುಪ್ಪಳಿಸಿದ್ದಾರೆ.
ಸಂಗೀತದ ನಾದ ಜೋರಾಗಿ ಹೊರ ಹೊಮ್ಮುತ್ತಿದ್ದಂತೆ ಹಲವರು ತಮ್ಮ ಕಾರಿನ ವಾಹನಗಳ ಹಾರ್ನ್ ಹೊಡೆದು ಸದ್ದು ಮಾಡಿದ್ದು, ಇನ್ನೂ ಕೆಲವರು ತಮ್ಮ ಕಾರನ್ನು ಅಲುಗಾಡಿಸಿ ಕಾರನ್ನೇ ನೃತ್ಯ ಮಾಡಿಸಿದ್ದಾರೆ. ಒಟ್ಟಾರೆಯಾಗಿ ತಿಂಗಳಿನಿಂದ ನಾಲ್ಕು ಗೋಡೆಗಳ ಮಧ್ಯೆಯೇ ಬಂದಿಯಾಗಿದ್ದ ಜನರು ತಿಂಗಳ ನಂತರ ಸಂತೋಷವಾಗಿ ಕಳೆದಿದ್ದಾರೆ.
ಆದರೆ ಈ ಕಾರ್ಯಕ್ರಮ ಪಾಲ್ಗೊಳ್ಳುವಿಕೆಗಾಗಿ ಪ್ರಜೆಗಳು ಯಾವ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ. ಹೊರತಾಗಿ ಸೋಂಕು ತಡೆಯುವಿಕೆ ಮುಂಜಾಗ್ರತೆಯಿಂದಾಗಿ ಪ್ರತಿ ಕಾರಿನಲ್ಲಿ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದ್ದ ನಿಯಮವನ್ನು ಪಾಲಿಸಲಾಗಿದೆ.ಯಾರೂ ಕಾರಿನಿಂದ ಹೊರಬರದೇ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ.
ಜಾ®Õ… ಹಾಪಿR®Õ… ವಿಶ್ವವಿದ್ಯಾಲಯದ ಪ್ರಕಾರ, ಜರ್ಮನಿಯಲ್ಲಿ 164,000 ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 6,700 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.