ಬೆಂಗಳೂರು: ಬಿಜೆಪಿಯವರಿಗೆ ಕೆಲಸವಿಲ್ಲ, ಹೀಗಾಗಿ ಕಾಂಗ್ರೆಸ್ ಸರಕಾರದ ವಿರುದ್ಧ ಜಾರ್ಜ್‌ಶೀಟ್ ಬಿಡುಗಡೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಕೇವಲ ಟೀಕೆಗಳನ್ನೇ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ವಿಪಕ್ಷವಾಗಿ ಏನೋ ಮಾಡಬೇಕೆಂದು ಮಾಡುತ್ತಿದ್ಧಾರೆ ಅಷ್ಟೇ ಅದರಲ್ಲಿ ಯಾವುದೇ ಹುರುಳಿಲ್ಲ. ಚಾರ್ಜ್‌ಶೀಟ್‌ಗೆ ಯಾವುದೇ ಅರ್ಥವಿಲ್ಲ. ಮೊದಲು ವಿಪಕ್ಷದ ನಾಯಕರನ್ನು ಅವರು ಆಯ್ಕೆ ಮಾಡಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗುತ್ತಿರುವವರ ಬಗ್ಗೆ ಕಾಳಜಿ ವಹಿಸಲಿ ಎಂದು ಸಲಹೆ ನೀಡಿದರು.
ಜಗದೀಶ್ ಶೆಟ್ಟರ್ ನಮ್ಮ ಪಕ್ಷದಲ್ಲಿ ನಾಲ್ಕು ಬಾರಿ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ್ದರು. ಅವರು ಕೆಲಸ ಇಲ್ಲದೇ ಬಿಡುಗಡೆ ಮಾಡಿದ್ದರೆ? ಹುಷಾರಾಗಿ ಮಾತನಾಡಲಿ.
-ಆರ್. ಅಶೋಕ್, ಮಾಜಿ ಡಿಸಿಎಂ