ಮುಂಡಗೋಡ: ಪಟ್ಟಣದಲ್ಲಿ ಜಿ+3 ಮನೆಗಳಿಗೆ ಫಲಾನುಭವಿಗಳು ಮೊದಲು ಎಷ್ಟು ಹಣ ತುಂಬಬೇಕು ಎನ್ನುವುದನ್ನು ಸಚಿವ ಶಿವರಾಮ ಹೆಬ್ಟಾರ್ ಅವರೊಂದಿಗೆ ಚರ್ಚಿಸಿ ನಿರ್ಣಯಿಸುವುದಾಗಿಪಪಂ ಮಾಸಿಕ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಶುಕ್ರವಾರ ಇಲ್ಲಿನ ಪಪಂ ಸಭಾಭವನದಲ್ಲಿಪಪಂ ಅಧ್ಯಕ್ಷೆ ರೇಣುಕಾ ರವಿ ಹಾವೇರಿ ಅಧ್ಯಕ್ಷತೆಯಲ್ಲಿ ಮಾಸಿಕ ಸಾಮಾನ್ಯ ಸಭೆಯಲ್ಲಿ ಚರ್ಚಸಿದರು.
ಪಪಂ ಸಭಾಭವನದ ಮೇಲ್ಭಾಗದಲ್ಲಿ ರೋಲರ್ ಸ್ಕೇಟಿಂಗ್‌ನವರಿಗೆ ಅವಕಾಶನೀಡಿದ ಕಾರಣ ಹಾಸುಗಲ್ಲುಗಳಿಗೆಹಾನಿಯಾಗುತ್ತಿದ್ದು ತಿಂಗಳಿಗೆ ಎರಡು ಸಾವಿರರೂ.ನಂತೆ ಅವರಿಂದ ಬಾಡಿಗೆ ವಸೂಲಿಮಾಡಲು ನಿರ್ಣಯಿಸಲಾಯಿತು.ಪ.ಪಂ ಸದಸ್ಯ ರಜಾಖಾನ ಪಠಾಣಮಾತನಾಡಿ, ಪಪಂನಿಂದ ಅನುಮತಿಪಡೆಯದೇ ಪಟ್ಟಣ ವ್ಯಾಪ್ತಿಯಲ್ಲಿದೊಡ್ಡ-ದೊಡ್ಡ ಕಟ್ಟಡಗಳನ್ನು ಕಟ್ಟಿಸಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ನೂತನ ಪೆಟ್ರೋಲ್‌ಬಂಕ್‌ಗೆ ಅನುಮತಿ ಪಡೆಯದಿರುವಬಗ್ಗೆ ಕೇಳಿದಾಗ ಈ ಹಿಂದೆ ನೋಟಿಸ್ ಜಾರಿ ಮಾಡಲಾಗಿದ್ದು ಉತ್ತರ ಬಂದಿಲ್ಲ. 3 ನೋಟಿಸ್ ಜಾರಿ ಮಾಡಿ ನಂತರ ಕೋರ್ಟ್‌ಗೆ ಹಾಕಲಾಗುವುದು ಎಂದು ಮುಖ್ಯಾಧಿಕಾರಿ ಸಂಗನಬಸಯ್ನಾ ತಿಳಿಸಿದರು.
ಕರ ತುಂಬದ ಮನೆಗಳಿಂದ ಕಡ್ಡಾಯವಾಗಿ ಕರ ವಸೂಲಿ ಮಾಡಬೇಕೆಂದು ಸದಸ್ಯ ವಿಶ್ವನಾಥ ಪವಾಡಶೆಟ್ಟರ ಹೇಳಿದಾಗಮುಖ್ಯಾಧಿಕಾರಿ ಠರಾವು ಪಾಸ್ ಮಾಡಿ ಕೊಡಿ, ಜಿಲ್ಲಾಧಿಕಾರಿ ಬಳಿ ಕಳುಹಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಸದಸ್ಯ ಶ್ರೀಕಾಂತ ಸಾನು ದೂರಿದರು.ಇನ್ನೊಂದು ಕಸ ವಿಲೇವಾರಿ ವಾಹನದವ್ಯವಸ್ಥೆಯನ್ನು ಸದ್ಯದಲ್ಲೇ ಮಾಡಲಾಗುವುದು ಎಂದು ಇಂಜಿನಿಯರ್ ಶಂಕರ ದಂಡಿನ ತಿಳಿಸಿದರು.
ಪ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಫಣಿರಾಜ ಹದಳಗಿ ಮಾತನಾಡಿ, ಎಪಿಎಂಸಿ ಆವರಣದಲ್ಲಿ ಕಟ್ಟುತ್ತಿರುವ ನೂತನ ಕಟ್ಟಡಗಳಿಗೆ ಪಪಂನಿಂದ ಅನುಮತಿಪಡೆಯದೇ ಇರುವ ಕುರಿತು ಚರ್ಚಿಸಿ, ಜಿಲ್ಲಾಉಸ್ತುವಾರಿ ಸಚಿವರು ಬೇಡ್ತಿ ನದಿಯಿಂದತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತಂದಿದ್ದು ಸನವಳ್ಳಿ ಕೆರೆಗೆ ನೀರು ತುಂಬಿಸುವುದು ಬೇಡ. ಸನವಳ್ಳಿ ಕೆರೆಯಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು ಈ ಕೆರೆಗೆ ಬೇಡ್ತಿ ನದಿಯಿಂದ ನೀರು ತುಂಬಿಸುವುದು ಬೇಡ ಎಂದಾಗ ಈ ಬಗ್ಗೆ ಸರ್ವ ಸದಸ್ಯರು ಸೇರಿ ಠರಾವು ಬರೆಯಿಸಿ ಸಚಿವರೊಂದಿಗೆ ಚರ್ಚಿಸುವುದಾಗಿ ತೀರ್ಮಾನಿಸಲಾಯಿತು.
ಅಧ್ಯಕ್ಷೆ ರೇಣುಕಾ ರವಿ ಹಾವೇರಿ, ಉಪಾಧ್ಯಕ್ಷ ಮಂಜುನಾಥ ಹರಮಲಕರ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಲಮಾಣಿ, ಸರ್ವ ಸದಸ್ಯರು ಮತ್ತು ಸಿಬ್ಬಂದಿ ಇದ್ದರು.