Advertisement

ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನ ಹಕ್ಕುಗಳಿವೆ

06:04 PM Oct 11, 2021 | Team Udayavani |

ಕೋಲಾರ: ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನ ಹಕ್ಕುಗಳಿದ್ದು, ಈ ಕುರಿತು ಅರಿವು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್‌ ಗಜಾನನಭಟ್‌ ಸಲಹೆ ನೀಡಿದರು.

Advertisement

ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ವಕೀಲರ ಸಂಘ, ವಿವಿಧ ಇಲಾಖೆಗಳ ಆಶ್ರಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸದ ಅಂಗವಾಗಿ ಭಾರತ ದೇಶವಾಸಿಗಳಿಗೆ ರಾಷ್ಟ್ರೀಯ ಜಾಗƒತಿ ಮತ್ತು ಅಪರಿಮಿತ ಕಾನೂನು ಅರಿವು “ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳು’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ;- ರಾಮರಾಜ್ಯ ಮತ್ತು ಪಂಚಾಯತ್ ರಾಜ್ ನಡುವೆ ಸಾಮ್ಯತೆ?

ಆಧಾರ್‌ ಪಡೆದುಕೊಳ್ಳಿ: ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾನೂನಿನಲ್ಲಿ ಹಲವು ಹಕ್ಕುಗಳನ್ನು ನೀಡಿದೆ, ಉದ್ಯೋಗದಲ್ಲಿ ಮೀಸಲಾತಿ ನೀಡಿದೆ, ನೀವು ಬದುಕಲು ಅಗತ್ಯವಾದ ಪಡಿತರ, ಆಧಾರ್‌ ಪಡೆದುಕೊಳ್ಳಿ, ಮತದಾರರಾಗಿ ನೋಂದಾಯಿಸಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಸಿ.ಎಚ್‌.ಗಂಗಾಧರ್‌, ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರಿಗೆ ಅನುಕಂಪದ ಅಗತ್ಯವಿಲ್ಲ, ಅವರನ್ನು ಸಮಾಜದಲ್ಲಿ ಸಮಾನತೆಯಿಂದ ಕಾಣುವಂತಾಗಬೇಕು. ಈ ನಿಟ್ಟಿನಲ್ಲಿ ಕಾನೂನು ಅವರಿಗಾಗಿ ರೂಪಿಸಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

Advertisement

ಸೌಲಭ್ಯಗಳ ಪ್ರಚುರಪಡಿಸಿ: ಲಿಂಗತ್ವ ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣುವುದು ಕಾನೂನು ರೀತಿಯಲ್ಲಿ ಅಪರಾಧವಾಗುತ್ತದೆ, ಅವರು ಮನುಷ್ಯರೇ ಆಗಿದ್ದು, ಅವರನ್ನು ಗೌರವದಿಂದ ಕಾಣಬೇಕು, ಅವರು ಬದುಕಲು ಸರ್ಕಾರದ ಇಲಾಖೆಗಳು ಅವರಿಗಾಗಿ ಇರುವ ಸೌಲಭ್ಯಗಳನ್ನು ಪ್ರಚಾರಪಡಿಸಬೇಕು ಎಂದು ಸೂಚಿಸಿದರು.

ಉನ್ನತ ಹುದ್ದೆ ಅಲಂಕಾರ: ಅಪರ ಸಿವಿಲ್‌ ನ್ಯಾ.ಎನ್‌.ಅನುಪಮಾ ಮಾತನಾಡಿ, ಎಲ್ಲರಂತೆ ಸಮಾನತೆಯ ಜೀವನ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಿಗಲು ಸರ್ಕಾರ ಅನೇಕ ಯೋಜನೆ ನೀಡಿದೆ, ಇತ್ತೀಚಿಗೆ ಅನೇಕರು ಸಮಾಜದ ಉನ್ನತ ಹುದ್ದೆಗಳಿಗೂ ಬಂದಿದ್ದು, ಬದುಕು ರೂಪಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ಉದ್ಯಮ ಸ್ಥಾಪನೆಗೆ ಅವಕಾಶ: ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್‌ ಮಾತನಾಡಿ, ಭಿûಾಟನೆ ಬೇಡ, ನಿಮಗೆ ಬದುಕಲು ವಿವಿಧ ಯೋಜನೆಗಳಿವೆ, ಉದ್ಯಮ ಸ್ಥಾಪನೆಗೆ ಸರ್ಕಾರ ಅವಕಾಶ ನೀಡುತ್ತಿದೆ. ಇದರ ಪ್ರಯೋಜನ ಪಡೆಯಿರಿ ಎಂದು ಹೇಳಿದರು.

ಮಹಿಳಾ ಅಭಿವೃದ್ಧಿ ನಿಗಮದಿಂದ ಸಿಗುವ ಸೌಲಭ್ಯಗಳ ಕುರಿತು ಬಿ.ಎಸ್‌.ಶೀಲಾ, ಕೌಟುಂಬಿಕ ದೌರ್ಜನ್ಯ ತಡೆ ಕುರಿತು ವಿ.ಸುಜಾತಾ, ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೋದ್ದೇಶಗಳು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ನ್ಯಾಯಾಧೀಶ ಸಿ.ಎಚ್‌.ಗಂಗಾಧರ್‌ ಮಾತನಾಡಿದರು. ಗಮನ ಮಹಿಳಾ ಸಮೂಹದ ಸಂಘಟಕ ಶಾಂತಮ್ಮ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next