ಜೈಪುರ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್‌ಹಾಗೂ ಮಾಜಿ ಡಿಸಿಎಂ ಸಚಿನ್ ಪೈಲಟ್ ಅವರ ಬೆಂಬಲಿಗರ ನಡುವೆ ಗುರುವಾರ ಘರ್ಷಣೆ ನಡೆದಿದೆ. ಇಬ್ಬರೂ ನಾಯಕರ ಬೆಂಬಲಿಗರು ಪರಸ್ಪರ ಕೈ-ಕೈ ಮಿಲಾಯಿಸಿರುವುದು ವರದಿಯಾಗಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಉಸ್ತುವಾರಿ ಅಮೃತ್ ಧವನ್ ನೇತೃತ್ವದಲ್ಲಿ ಅಭಿಪ್ರಾಯ ಸಂಗ್ರಹ ಸಭೆ ಗುರುವಾರ ವೈಶಾಲಿ ನಗರದಲ್ಲಿ ನಡೆಯಿತು. ಸಭೆಗೆ ಅಗಮಿಸಿದ್ದ ಗೆಹ್ಲೋಟ್ ಹಾಗೂ ಪೈಲಟ್ ಬೆಂಬಲಿಗರಾದ ರಾಮಚಂದ್ರ ಚೌಧರಿ ಹಾಗೂ ಧರ್ಮೇಂದ್ರ ರಾಥೋಡ್ ಪರಸ್ಪರ ಘರ್ಷಣೆಗೆ ಇಳಿದಿದ್ದಾರೆ. ಕಾರ್ಯಕರ್ತರಿಗೆ ಸಣ್ಣ ಮಟ್ಟದ ಗಾಯಗಳಾಗಿದ್ದು ಯಾವುದೇ ಗಂಭೀರ ಸಮಸ್ಯೆ ವರದಿಯಾಗಿಲ್ಲ ಎಂದು ಪೊಲೀ ಸರು ತಿಳಿಸಿದ್ದಾರೆ. ವರ್ಷಾಂತ್ಯದಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆ ನಡೆಯಬೇಕಿದ್ದು ಅದಕ್ಕೂ ಮೊದಲೇ ಪಕ್ಷದಲ್ಲಿ ಭಿನ್ನಮತ ತಲೆದೋರಿರುವುದು ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.