Advertisement

ಗೆಹ್ಲೋಟ್ ಅಥವಾ ತರೂರ್ ಅಧ್ಯಕ್ಷರಾದರೂ ರಾಹುಲ್ ರ ಕೈಗೊಂಬೆ: ಬಿಜೆಪಿ

07:14 PM Sep 21, 2022 | Team Udayavani |

ನವದೆಹಲಿ: ”ಅಶೋಕ್ ಗೆಹ್ಲೋಟ್ ಅಥವಾ ಶಶಿ ತರೂರ್ ಯಾರೇ ಕಾಂಗ್ರೆಸ್ ಅಧ್ಯಕ್ಷರಾಗಲಿ ಮುಖ್ಯ ಚಾಲಕ ರಾಹುಲ್ ಗಾಂಧಿಯವರ ಕೈಗೊಂಬೆಯಾಗಲಿದ್ದಾರೆ” ಎಂದು ಬಿಜೆಪಿ ಸೋಮವಾರ ಹೇಳಿದೆ.

Advertisement

ಬಿಜೆಪಿ ರಾಷ್ಟ್ರೀಯ ವಕ್ತಾರ ಟಾಮ್ ವಡಕ್ಕನ್ ಅವರು ಕಾಂಗ್ರೆಸ್ ‘ಭಾರತ್ ಜೋಡೋ ಯಾತ್ರೆ’ಯನ್ನು “ಭ್ರಷ್ಟಾಚಾರ ಜೋಡೋ ಯಾತ್ರೆ” ಎಂದು ಕರೆದಿದ್ದು, ಇದು ಕನ್ಯಾಕುಮಾರಿಯಲ್ಲಿ 2ಜಿ ಹಗರಣದ ಪಾಲುದಾರ ಡಿಎಂಕೆಯ ಆಶೀರ್ವಾದದೊಂದಿಗೆ ಆರಂಭವಾಗಿ ಕೇರಳವನ್ನು ಪ್ರವೇಶಿಸಿದೆ ಎಂದರು.

ಇದನ್ನೂ ಓದಿ: ಫ್ಯಾಕ್ಟ್‌ ಚೆಕ್‌: ಪತಂಜಲಿ ʼಬೀಫ್‌ ಬಿರಿಯಾನಿʼ ಉತ್ಪನ್ನ ಫೋಟೋ ವೈರಲ್:ಹಿಂದಿನ ಅಸಲಿಯತ್ತೇನು?

‘ದೆಹಲಿಯ ಎಎಪಿ ಸರ್ಕಾರದ ಭ್ರಷ್ಟ ಅಬಕಾರಿ ನೀತಿಯ ಬಗ್ಗೆ ರಾಹುಲ್ ಗಾಂಧಿ ಜಾಣ ಮೌನವನ್ನು ಹೊಂದಿದ್ದಾರೆ. ಏಕೆಂದರೆ ಇದು ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದ ಅಬಕಾರಿ ನೀತಿಯ ನಕಲು ಆಗಿದೆ’ ಎಂದರು.

ಗಾಂಧಿ ವಂಶಸ್ಥರು ಭ್ರಷ್ಟಾಚಾರವನ್ನು “ಸಾಂಸ್ಥಿಕೀಕರಣಗೊಳಿಸುತ್ತಿದ್ದಾರೆ” ಎಂದು ಆರೋಪಿಸಿದ ವಡಕ್ಕನ್ ಅವರು ಎಎಪಿ ಸರ್ಕಾರದ ಅಬಕಾರಿ ನೀತಿ (ಈಗ ಹಿಂತೆಗೆದುಕೊಳ್ಳಲಾಗಿದೆ) ಬಗ್ಗೆ ಮಾತನಾಡಬೇಕು ಎಂದರು.

Advertisement

ತಾನು ಈ ಹಿಂದೆ ಇದ್ದ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯನ್ನು ಉಲ್ಲೇಖಿಸಿದ ವಡಕ್ಕನ್, “ಕಾಂಗ್ರೆಸ್ ಪಕ್ಷವು ಯಾವುದೇ ವ್ಯವಸ್ಥೆಯನ್ನು ಅಳವಡಿಸಿಕೊಂಡರೂ, ಗೆಹ್ಲೋಟ್ ಅಥವಾ ತರೂರ್ ಅಧ್ಯಕ್ಷರಾಗಲಿ … ಅವರು ಕೇವಲ ಕೈಗೊಂಬೆಗಳಾಗಿರುತ್ತಾರೆ. ಮುಖ್ಯ ಚಾಲಕ ರಾಹುಲ್ ಗಾಂಧಿ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next