Advertisement

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

06:58 PM Mar 29, 2024 | Team Udayavani |

ದಾವಣಗೆರೆ: ಹಿಂದೆ ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವ ಮಾತಿತ್ತು. ಈಗ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕ ನಾವು ಅಡುಗೆ ಮನೆಗೆ ಮಾತ್ರವೇ ಸೀಮಿತವಲ್ಲ, ಅಧಿಕಾರವನ್ನೂ ಮಾಡಬಲ್ಲೆವು ಎಂಬುದನ್ನು ಸಾಬೀತುಪಡಿಸುತ್ತಿದ್ದೇವೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.

Advertisement

ಗುರುವಾರ ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಂದು ಚಿತ್ರದುರ್ಗದ ಒನಕೆ ಓಬವ್ವ ತನ್ನ ಗಂಡನ ದಾಹ ತೀರಿಸಲು ನೀರು ತರುವ ವೇಳೆ ಹೈದರಾಲಿ ಸೈನ್ಯ ಕಂಡು ಹೆದರದೆ ಒಬ್ಬೊಂಟಿಯಾಗಿ ಹೋರಾಡಿ ಇಡೀ ಸೈನ್ಯವನ್ನೇ ಸರ್ವನಾಶ ಮಾಡಿದಳು. ಅಂತಹ ಧೀರ ಮಹಿಳೆ ನಮ್ಮ- ನಿಮ್ಮಂತಹ ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದರು.

ಮಹಿಳೆಯರು ರಾಜಕಾರಣಕ್ಕೆ ಬರಬೇಕು ದೃಢ ಸಂಕಲ್ಪದಿಂದ ನನ್ನಂತಹ ಮಹಿಳೆಯರಿಗೆ ಲೋಕಸಭೆಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಮತದಾರರು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರ ಕೈಬಲಪಡಿಸಬೇಕು. ವಿಕಸಿತ ಭಾರತ ನಿರ್ಮಾಣಕ್ಕೆ ಸಹಾಯ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಕೂಡ ಮಹಿಳಾ ಶಕ್ತಿ, ಸಬಲೀಕರಣಕ್ಕೆ ಸಾಕಷ್ಟು

ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಾರಿ ಶಕ್ತಿ ಬಗ್ಗೆ ಅವರಿಗಿರುವಷ್ಟು ಕಾಳಜಿ ಕಾಂಗ್ರೆಸ್‌ ನಾಯಕರಿಗಿಲ್ಲ. ದೇಶದ ಸಂಸ್ಕೃತಿ, ಪರಂಪರೆ, ಇತಿಹಾಸ ಉಳಿಸುವ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ. ಅದಕ್ಕಾಗಿಯೇ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು. ತಮ್ಮನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಾಲಕಟ್ಟೆ ಗ್ರಾಮದ ಕರಿಯಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬೂತ್‌ ಅಧ್ಯಕ್ಷ ಅಡಕಿ ಶಿವಣ್ಣ, ನಾಗಪ್ಪಜ್ಜ, ಸಿರಿಗೆರೆ ಚಂದ್ರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಬೇವಿನಹಳ್ಳಿ ಗ್ರಾಮದಲ್ಲಿ ತೆರದ ವಾಹನದಲ್ಲಿ ಪ್ರಚಾರ ನಡೆಸಿದ ಗಾಯತ್ರಿ ಸಿದ್ದೇಶ್ವರ, ಕಾಶಿ ವಿಶ್ವನಾಥ ಮತ್ತು ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಗ್ರಾಪಂ ಸದಸ್ಯ ಬೂದಾಳ್‌ ಹಾಲೇಶ್‌ ಮತ್ತು ಉಮೇಶ್‌ ನಿವಾಸಕ್ಕೆ ಭೇಟಿ ನೀಡಿ ಮತಯಾಚನೆ ಮಾಡಿದರು. ಕಡ್ಲೆಗೊಂದಿ ಗ್ರಾಮದಲ್ಲಿ ತೆರೆದ ವಾಹನದ ಮೂಲಕ ಮತ ಯಾಚಿಸಿ ಬಸವೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು. ಗ್ರಾಮದ ಬಸಪ್ಪ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.

Advertisement

ಸಲಗನಹಳ್ಳಿ ಗ್ರಾಮದಲ್ಲೂ ಪ್ರಚಾರ ನಡೆಸಿದ ಗಾಯತ್ರಿ ಸಿದ್ದೇಶ್ವರ, ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಬೆಳ್ಳೂಡಿ ಗ್ರಾಮದಲ್ಲಿ ಮತಯಾಚನೆ ನಡೆಸಿ ಉಡಸಲಾಂಭಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಬ್ಯಾಲದಹಳ್ಳಿ ಗ್ರಾಮದ ಬೂತ್‌ ಅಧ್ಯಕ್ಷ ಮಂಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಗ್ರಾಮದಲ್ಲಿ ಮತಯಾಚನೆ ಬಳಿಕ ಉಡಸಲಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಎಕ್ಕೆಗೊಂದಿ ಗ್ರಾಮದಲ್ಲಿ ಅದ್ಧೂರಿ ಪ್ರಚಾರ ನಡೆಸಿದ ಅವರು ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಭಾನುವಳ್ಳಿ ಗ್ರಾಮದಲ್ಲೂ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ನಡೆಸಿದರು. ವಕೀಲ ಪಿ. ಪಾಟೀಲ್‌ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ರಾಮತೀರ್ಥ, ನಾಗೇನಹಳ್ಳಿ, ಹರ ಗನಹಳ್ಳಿ, ಹಲಸಬಾಳು ಗ್ರಾಮಗಳಲ್ಲೂ ಗ್ರಾಮ ದೇವರಿಗೆ ಪೂಜೆ ಸಲ್ಲಿಸಿ, ಮತಯಾಚನೆ ಮಾಡಿದರು.

ಹರಿಹರ ಶಾಸಕ ಬಿ.ಪಿ.ಹರೀಶ್‌, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್‌.ಎಂ. ವೀರೇಶ್‌ ಹನಗವಾಡಿ, ಜಿ.ಎಸ್‌. ಅಶ್ವಿ‌ನಿ, ಪ್ರೇಮಮ್ಮ, ಜಯಮ್ಮ, ಬಿ.ಎಂ. ಮರುಳಸಿದ್ದಪ್ಪ, ಸಿದ್ದೇಗೌಡರು, ಹನುಮಂತ ಗೌಡರು, ಪರಮೇಶ್ವರಪ್ಪ, ಶಾಂತ ಕುಮಾರ್‌, ಸಾಕ್ಷಿ ಸಿಂಧು , ರೂಪಾ, ಗ್ಯಾರಳ್ಳಿ ಶಿವಣ್ಣ, ರಾಜು, ಬಿಜೆಪಿ ಕಾರ್ಯಕರ್ತರು ಪ್ರಚಾರದುದ್ದಕ್ಕೂ ಸಾಥ್‌ ನೀಡಿದರು.

ದಾವಣಗೆರೆ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿಂದು ಪ್ರಚಾರ
ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಮಾ. 29ರಂದು ಶುಕ್ರವಾರ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 9:30ಕ್ಕೆ ಹಳೇಬಾತಿ ಆಂಜನೇಯ ದೇವಸ್ಥಾನ, 9:45ಕ್ಕೆ ಗುಡ್ಡದ ಕ್ಯಾಂಪ್‌, 10ಕ್ಕೆ ನೀಲಾನಹಳ್ಳಿ, 10:15ಕ್ಕೆ ದೊಡ್ಡಬಾತಿ, 10:30ಕ್ಕೆ ಆವರಗೊಳ್ಳ, 10:45ಕ್ಕೆ ಕಕ್ಕರಗೊಳ್ಳ, 11ಕ್ಕೆ ಕೋಡಿಹಳ್ಳಿ, 11:15ಕ್ಕೆ ಅರಸಾಪುರ, 11:30ಕ್ಕೆ ಹೊಸಕಡ್ಲೆàಬಾಳು, 11:45ಕ್ಕೆ ಚಿಕ್ಕಓಬಜ್ಜಿಹಳ್ಳಿ, 12ಕ್ಕೆ ದೊಡ್ಡ ಓಬಜ್ಜಿಹಳ್ಳಿ, 12:15ಕ್ಕೆ ಮಾಗನಹಳ್ಳಿ ಕೋಡಿಕ್ಯಾಂಪ್‌, 12:30ರಿಂದ ರಾತ್ರಿ 10ರವರೆಗೆ ಅಮೃತನಗರ, ಹಳೇ ಕಡ್ಲೆàಬಾಳು, ದೇವರಹಟ್ಟಿ, ಬೂದಾಳು, ಚಿತ್ತಾನಹಳ್ಳಿ, ಕಲಪನಹಳ್ಳಿ, ಬೇತೂರು, ಪುಟಗನಾಳ್‌, ಕಾಡಜ್ಜಿ, ನಾಗರಕಟ್ಟೆ, ರಾಂಪುರ, ಮಲ್ಲಾಪುರ, ಲಿಂಗದಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ಮಾಡುವರು.

Advertisement

Udayavani is now on Telegram. Click here to join our channel and stay updated with the latest news.

Next