Advertisement

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

10:16 AM Mar 28, 2024 | Team Udayavani |

ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಬುಧವಾರ ನಗರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು. ವಿವಿಧ ಪಾರ್ಕ್‌ಗಳಲ್ಲಿ ಮತಯಾಚನೆ ಮಾಡಿದ ಅವರು, ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಯೋಜನೆಗಳ ಜನೋಪಯೋಗಿಯಾಗಿವೆ. ಇಡೀ ವಿಶ್ವವೇ ಮೋದಿ ಅವರನ್ನು ಗಮನಿಸುತ್ತಿದೆ.

Advertisement

ಭಾರತ ಮತ್ತೂಮ್ಮೆ ವಿಶ್ವಗುರು ಸ್ಥಾನದಲ್ಲಿ ಇರಲು ಕೇಂದ್ರದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ದಾವಣಗೆರೆಯಲ್ಲಿ ಮತ್ತೆ ಬಿಜೆಪಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರ ದಾವಣಗೆರೆಗೆ ಸ್ಮಾರ್ಟ್‌ ಸಿಟಿ, ವಿವಿಧ ರೈಲ್ವೆ ಯೋಜನೆಗಳು, ಅಂಚೆಕಚೇರಿ ಪ್ರಧಾನ ಕಚೇರಿ, ಪಾಸ್‌ ಪೋರ್ಟ್‌ ಸೇವಾ ಕೇಂದ್ರ, ರಾಜ್ಯ ವಿಮಾ ಕಾರ್ಮಿಕರ ಆಸ್ಪತ್ರೆ, ಕೇಂದ್ರಿಯ ವಿದ್ಯಾಲಯ ಸೇರಿದಂತೆ ಅನೇಕ ಯೋಜನೆ ನೀಡಿದೆ. ಮುಂದಿನ ದಿನಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ, ಆರ್ಥಿಕ ಮುನ್ನಡೆ ಸಾಧಿಸಬೇಕೆಂದರೆ ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನಿ ಆಗಬೇಕು. ಅವರ ಕೈಬಲಪಡಿಸಲು ನನ್ನನ್ನು ಲೋಕಸಭಾ ಕ್ಷೇತ್ರದಿಂದ ಗೆಲ್ಲಿಸಿ ಕೇಂದ್ರಕ್ಕೆ ಕಳುಹಿಸಬೇಕು ಎಂದರು.

ಶಾಸಕ ಬಿ.ಪಿ.ಹರೀಶ್‌, ಡಾ| ಬಿ.ಎಸ್‌. ನಾಗಪ್ರಕಾಶ್‌, ಜಿ.ಎಸ್‌.ಅನಿತ್‌ ಕುಮಾರ್‌, ಎಸ್ಟಿ ಮೋರ್ಚಾ ರಾಜ್ಯ ಉಪಾ ಧ್ಯಕ್ಷ ಶ್ರೀನಿವಾಸ್‌ ದಾಸಕರಿಯಪ್ಪ, ಎಚ್‌.ಎನ್‌.ಶಿವಕುಮಾರ್‌, ಸಿದ್ದೇಶ್‌, ನಾಗಣ್ಣ, ಹರೀಶ್‌, ಜೋತಿ ಸಿದ್ದೇಶ್‌, ಉಪ ಮೇಯರ್‌ ಯಶೋಧಾ ಯಗಪ್ಪ, ಶಾರದಾ ರಾಯ್ಕರ್‌, ಸಚಿನ್‌ ಇತರರು ಇದ್ದರು.

ಕ್ರಿಕೆಟ್‌ ಆಡಿ ಖುಷಿ ಪಟ್ಟ ಗಾಯತ್ರಿ
ರಸ್ತೆ ಬದಿಯಲ್ಲಿ ಸ್ವತ್ಛತಾ ಕಾರ್ಯ ಮಾಡುತ್ತಿದ್ದ ಪೌರಕಾರ್ಮಿಕರ ಜೊತೆ ಸಮಾಲೋಚನೆ ನಡೆಸಿದ ಗಾಯತ್ರಿ ಸಿದ್ದೇಶ್ವರ, ಪ್ರಧಾನಿ ನರೇಂದ್ರ ಮೋದಿ ಅವರು ಪೌರಕಾರ್ಮಿಕರ ಕಷ್ಟ ಅರಿತುಕೊಂಡು ಸ್ವತ್ಛ ಭಾರತ್‌ ಯೋಜನೆ ಜಾರಿಗೊಳಿಸಿದ್ದಾರೆ. ಅಷ್ಟೇ ಅಲ್ಲ, ಮೋದಿ ಯಾವಾಗಲೂ ಪೌರಕಾರ್ಮಿಕರಿಗೆ ಗೌರವ
ಸಲ್ಲಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು. ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಕ್ರಿಕೆಟ್‌ ಆಡುತ್ತಿದ್ದ ಹುಡುಗರ ಜೊತೆ ಕೆಲ ಸಮಯ ಕಳೆದರು. ಬ್ಯಾಟಿಂಗ್‌ ಮಾಡುವ ಮೂಲಕ ಮತದಾನದ ಹಕ್ಕು ಹೊಂದಿರುವ ಎಲ್ಲ ಯುವಕರು ಬಿಜೆಪಿಗೆ ಮತ ಚಲಾಯಿಸುವಂತೆ ಕೋರಿದರು. ಬ್ಯಾಡ್ಮಿಂಟನ್‌ ಕೂಡ ಆಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next