Advertisement

ಪ್ರಜಾಪತಿ ನಾಪತ್ತೆ : ರೇಪ್‌ ಆರೋಪಿ ಸಚಿವನಿಗಾಗಿ ಪೊಲೀಸರ ಹುಡುಕಾಟ

04:37 PM Mar 01, 2017 | udayavani editorial |

ಲಕ್ನೋ : ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಲಕ್ನೋದ ಹಜರತ್‌ಗಂಜ್‌ ನಲ್ಲಿನ ಪಾರ್ಕ್‌ ರೋಡ್‌ನ‌ಲ್ಲಿರುವ ವಿಧ್ಯಕ್‌ ನಿವಾಸ್‌ ಮತ್ತು ಗೌತಮ್‌ ಪಲ್ಲಿಯಲ್ಲಿನ ಅಧಿಕೃತ ನಿವಾಸದಲ್ಲಿ ಅತ್ಯಾಚಾರ ಆರೋಪದ ವಿವಾದಾತ್ಮಕ ಸಚಿವ ಗಾಯತ್ರಿ ಪ್ರಜಾಪತಿಯನ್ನು ಹುಡುಕಿ ಪತ್ತೆ ಹಚ್ಚುವಲ್ಲಿ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ರಾತ್ರಿಯೂ ವಿಫ‌ಲರಾಗಿದ್ದಾರೆ. 

Advertisement

ಮಹಿಳೆಯೊಬ್ಬರನ್ನು ಬ್ಲಾಕ್‌ ಮೇಲ್‌ ಮಾಡಿ ಅತ್ಯಾಚಾರ ಮಾಡಿರುವ ಆರೋಪ ಹೊತ್ತಿರುವ ಅಖೀಲೇಶ್‌ ಯಾದವ್‌ ಸರಕಾರದಲ್ಲಿ ಸಚಿವರಾಗಿರುವ ಪ್ರಜಾಪತಿ ವಿರುದ್ಧ ಎಫ್ ಐ ಆರ್‌ ದಾಖಲಿಸುವಂತೆ ಸುಪ್ರೀಂ ಕೋರ್ಟ್‌ ಕಳೆದ ಫೆ.17ರಂದು ಉತ್ತರ ಪ್ರದೇಶ ಪೊಲೀಸರಿಗೆ ಆದೇಶ ನೀಡಿತ್ತು. 

ಸಚಿವ ಪ್ರಜಾಪತಿ ಅವರು ತಮ್ಮ ಅಧಿಕೃತ ನಿವಾಸಗಳಲ್ಲಿ ಪತ್ತೆಯಾಗಿಲ್ಲ; ನಾವು ನಮ್ಮ ತಂಡವನ್ನು ಅಮೇಠಿಗೂ ಕಳುಹಿಸಿದ್ದೇವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿರುವುದನ್ನು ಎನ್‌ಡಿಟಿವಿ ವರದಿ ಮಾಡಿದೆ.

ಉತ್ತರ ಪ್ರದೇಶ ವಿಧಾನಸಭೆಗೆ ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಟಿಕೇಟ್‌ನಲ್ಲಿ ಸ್ಪರ್ಧಿಸುತ್ತಿರುವ ಪ್ರಜಾಪತಿ ಅವರನ್ನು ಇಲ್ಲಿ ಕೊನೆಯ ಬಾರಿಗೆ ಕಾಣಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next