ದೃಶ್ಯ ಕಂಡು ಬಂತು.
Advertisement
ಇದು ಗ್ರಾಮದಲ್ಲಿ ಶನಿವಾರ ನಡೆದ ಗವಿಸಿದ್ದೇಶ್ವರ ಮುತ್ಯಾನ ಹಾಗೂ ಮಹಾಲಕ್ಷ್ಮೀ ದೇವಿಯ ಜಾತ್ರೆ ವೇಳೆ ಕಂಡು ಬಂತು. ಮಹಾಲಕ್ಷ್ಮೀ ದೇವಿಯ ದೇವಾಲಯದ ಸಮೀಪದಲ್ಲಿ ಪಲ್ಲಕ್ಕಿಗಳು ಬರುತ್ತಿವೆ ಎನ್ನುವಷ್ಟರಲ್ಲಿಯೇ ಭಕ್ತರು ಡೊಳ್ಳು ವಾದ್ಯವೃಂದಸಮೇತ ಸ್ವಾಗತಿಸುವ ಕಾರ್ಯ ನಡೆಯಿತು.
ಇದಕ್ಕೂ ಮೊದಲು ಮಹಾಲಕ್ಷ್ಮೀ ದೇವಿಯ ಸಿಡಿ ಬಂಡಿಯ ಭವ್ಯ ಮೆರವಣಿಗೆ ಶ್ರೀದೇವಿಯ ಮೂಲಸ್ಥಳದಿಂದ ಪ್ರಮುಖ ಬೀದಿಗಳಲೂ ಡೊಳ್ಳು ಕುಣಿತದೊಂದಿಗೆ ನಡೂರ ಹಣಮಂತ ದೇವರ ಸುತ್ತುಹಾಕಿ ಈರಸಿದ್ದಪ್ಪನ ಮಠಕ್ಕೆ ತಲುಪಿ ಅಲ್ಲಿ
ಪೂಜೆಗೊಂಡು ಮರವಣಿಗೆ ಸಮೇತ ಮೂಲಸ್ಥಳಕ್ಕೆ ಬಂದು ತಲುಪಿತು. ನಂತರ ಭಕ್ತರಿಂದ ಪೂಜೆಗೊಂಡು ಪಲ್ಲಕ್ಕಿಗಳು ಗವಿಸಿದ್ದೇಶ್ವರ ಮುಕ್ತಿ ಮಂದಿರದಲ್ಲಿ ಹೂವಿನ ಹೆಚ್ಚಡ ಸ್ವೀಕರಿಸಿದ ನಂತರ ಭಕ್ತರು ಪ್ರಸಾದ ಸ್ವೀಕರಿಸಿದರು. ನಂತರ ಮಹಾಲಕ್ಷ್ಮೀ ದೇವಿ ಆವರಣದಲ್ಲಿ ಪಟ್ಟದ ಮಾರಾಯ ಬೂಸಪ್ಪ ಪೂಜೇರಿ ದೇವರ ಹೇಳಿಕೆಯಲ್ಲಿ ತೊಗರಿ ನೆಟೆ ಹಿಡಿತು, ಕಡಲಿ ಜೋಳ ಹಸರುನಿಸೆನೆ ಹಚ್ಚಿ ಹತ್ತಿ ಭಂಗಾರ ಖಡೆ ಹಾಕಿ ರೈತಗ ಬಗಲಾಗ ಹಿಡಿತಿನಿ ಎಂದು ಹೇಳಿದಾಗ ಜಾತ್ರೆ
ಕೊನೆಗೊಂಡಿತ್ತು.