Advertisement

ಗವಿ ವೀರಭದ್ರೇಶರ ರಥೋತ್ಸವ

12:46 PM Nov 11, 2018 | Team Udayavani |

ಹುಮನಾಬಾದ: ಮೀನಕೇರಾ ಗ್ರಾಮದ ಗವಿ ವೀರಭದ್ರೇಶ್ವರ 64ನೇ ರಥೋತ್ಸವ ಶುಕ್ರವಾರ ಮಧ್ಯರಾತ್ರಿ ಸಡಗರ ಸಂಭ್ರಮದಿಂದ ನೆರವೇರಿತು. ಗ್ರಾಮದ ಸ್ವಾಮೀಜಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು “ವೀರಭದ್ರೇಶ್ವರ ಮಹಾರಾಜಕೀ… ಜೈ’ ಎಂಬ ಘೋಷಣೆ ಕೂಗಿದರು. ರಥ ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಸಕ್ಕರೆ ಲಾಡು, ಕಲ್ಲು ಸಕ್ಕರೆ, ಉತ್ತತ್ತಿ, ಬಾದಾಮಿ, ಬಾಳೆ ಹಣ್ಣು ರಥದತ್ತ ಎಸೆದು ನಮನ ಸಲ್ಲಿಸಿದರು.

Advertisement

ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಚಿವ ಬಂಡೆಪ್ಪ ಖಾಶೆಂಪೂರ ಖಾಶೆಂಪೂರ ಮಾತನಾಡಿ, ಮೀನಕೇರಾ ವೀರಭದ್ರೇಶ್ವರ ದೇವಸ್ಥಾನ ಮಾತ್ರವಲ್ಲದೇ ಈ ಭಾಗಕ್ಕೆ ಹಿಂದೆಂದಿಗಿಂತ ಹೆಚ್ಚು ಅನುದಾನ ನೀಡಿ, ಅಭಿವೃದ್ಧಿಪಡಿಸಲಾಗುವುದು. ವಿಶೇಷವಾಗಿ ಮನ್ನಾಎಖ್ಖೆಳ್ಳಿ, ಬೋರಾಳ, ಮೀನಕೇರಾ ಮಾರ್ಗಕ್ಕೆ ಅತ್ಯಂತ ಅವಶ್ಯವಾದ ರಸ್ತೆ ಕಾಮಗಾರಿಗೆ ಅಗತ್ಯ ಅನುದಾನ ನೀಡಿ, ಅಭಿವೃದ್ಧಿಪಡಿಸುವುದಾಗಿ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ದೇವಸ್ಥಾನ ಅಭಿವೃದ್ಧಿಗೆ ಶಕ್ತಿಮೀರಿ ನೆರವು ನೀಡುವುದಾಗಿ ಭರವಸೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next