ಮುಂಬೈ: 2022ರ ಐಪಿಎಲ್ ಕೂಟದಲ್ಲಿ ಹಲವಾರು ಯುವ ಭಾರತೀಯ ವೇಗಿಗಳು ಮಿಂಚಿದ್ದಾರೆ. ಈ ಮೂಲಕ ರಾಷ್ಟ್ರೀಯ ತಂಡದ ಆಯ್ಕೆಗಾರರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಸನ್‌ರೈಸರ್ಸ್ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್ ಅವರನ್ನು ಹೊಗಳಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಮತ್ತು ಏಕದಿನ ಸರಣಿಗಾಗಿ ಭಾರತದ ತಂಡಕ್ಕೆ ಉಮ್ರಾನ್ ಮಲಿಕ್ ರನ್ನು ಸೇರಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. 2022ರ ಐಪಿಎಲ್ ನಲ್ಲಿ ಉಮ್ರಾನ್ ಮಲಿಕ್ ಇದುವರೆಗೆ 13 ಪಂದ್ಯಗಳಿಂದ 21 ವಿಕೆಟ್‌ಗಳನ್ನು ಪಡೆದಿದ್ದಾರೆ. ತನ್ನ ವೇಗದಿಂದ ಉಮ್ರಾನ್ ಎಲ್ಲರ ಗಮನ ಸೆಳೆದಿದ್ದಾರೆ. ‘ಉಮ್ರಾನ್ ಮಲಿಕ್ ರ ವೇಗ ಮಾತ್ರವಲ್ಲ, ಅವರ ನಿಖರತೆಯೂ ಉತ್ತಮವಾಗಿದೆ’ ಎಂದು ಗವಾಸ್ಕರ್ ಹೇಳಿದರು.
ಇದನ್ನೂ ಓದಿ:ಅಲ್ಲಿ ಲವ್- ಇಲ್ಲಿ ಮದುವೆ: ತಾಳಿ ಕಟ್ಟುವ ವೇಳೆ ಮದುವೆಗೆ ‘ನೋ ‘ಎಂದು ವಧುವಿನ ಹೈಡ್ರಾಮಾ
ಹಲವರು ವೇಗದಲ್ಲಿ ಬಾಲ್ ಮಾಡುವ ಪ್ರಯತ್ನದಲ್ಲಿ ಅಲ್ಲಿ ಇಲ್ಲಿ ಪಿಚ್ ಮಾಡುತ್ತಾರೆ. ಆದರೆ ಉಮ್ರಾನ್ ನಿಖರತೆ ಚೆನ್ನಾಗಿದೆ. ಅವರು ವೈಡ್ ಗಳನ್ನು ತುಂಬಾ ಕಡಿಮೆ ಎಸೆದಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.
Related Articles
ಆತ ವಿಕೆಟ್ ಟು ವಿಕೆಟ್ ಬೌಲಿಂಗ್ ಮಾಡುತ್ತಾನೆ. ಆತನನ್ನು ಎದುರಿಸುವುದು ಕಷ್ಟ. ಮುಂದಿನ ಇಂಗ್ಲೆಂಡ್ ಸರಣಿಯಲ್ಲಿ ಉಮ್ರಾನ್ ಬಹುತೇಕ ಟೀಂ ಇಂಡಿಯಾ ಪರವಾಗಿ ಆಡುಲಿದ್ದಾರೆ ಎಂದು ಸುನೀಲ್ ಗವಾಸ್ಕರ್ ಹೇಳಿದರು.