Advertisement

ಗಾವಳಿ ; 70 ಕುಟುಂಬಗಳಿಗೆ ರೂ. 2 ಲಕ್ಷ ಮೌಲ್ಯದ ಆಹಾರ ಪದಾರ್ಥ ವಿತರಣೆ

09:17 AM Mar 30, 2020 | sudhir |

ತೆಕ್ಕಟ್ಟೆ: ಜಗತ್ತಿನಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್‌ 19 ವೈರಸ್‌ ತಡೆಗಟ್ಟಲು ಇಡೀ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ ಡೌನ್‌ ಜಾರಿಯಲ್ಲಿದ್ದು , ಜಗತ್ತಿಗೆ ಮಹಾಮಾರಿಯಾಗಿ ಕಾಡುತ್ತಿರುವ ಕೋವಿಡ್‌ 19 ಅಟ್ಟಹಾಸದಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಆದರೂ ಅಲ್ಲಲ್ಲಿ ಮಾನವೀಯತೆಯ ಒರತೆ ಚಿಮ್ಮುತ್ತಲೇ ಇದೆ. ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗಾವಳಿ ಹಳ್ಳಾಡಿಯ ಆಸುಪಾಸಿನ ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ, ಬಡ ಕೂಲಿಕಾರ್ಮಿಕ 70 ಕುಟುಂಬಗಳಿಗೆ ದಾನಿ ಮುದ್ದುಸ್ವಾಮಿ, ಮಹೇಶ್‌ ನಾರಾಯಣ ಶೆಣೈ ಗಾವಳಿ ಅವರು ಸುಮಾರು 2 ಲಕ್ಷ ರೂ.ಮೌಲ್ಯದ ದೈನಂದಿನ ಆಹಾರ ಪದಾರ್ಥಗಳನ್ನು ಸಹಾಯದ ರೂಪದಲ್ಲಿ ಮಾ.29 ರಂದು ನೀಡಿ ಮಾನವೀಯತೆ ಮೆರೆದಿದ್ದಾರೆ. ಇಂತಹ ನಿಸ್ವಾರ್ಥ ಮನಸ್ಸಿನ ವ್ಯಕ್ತಿತ್ವದವರಾಗಿ ಮನುಕುಲದ ಉದ್ಧಾರಕ್ಕಾಗಿ ಪ್ರತಿಫಲಾಪೇಕ್ಷೆ ಇಲ್ಲದೇ ಸಹಾಯಗೈದಿರುವ ಇವರ ಸಮಾಜ ಸೇವೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಈ ಸಂದರ್ಭದಲ್ಲಿ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ಸದಸ್ಯ ಚಿಟ್ಟೆಬೈಲು ಜಗನ್ನಾಥ ಶೆಟ್ಟಿ, ಪದ್ಮನಾಭ ಕಿಣಿ ಗಾವಳಿ, ಮಹೇಶ್‌ ಶೆಣೈ ಗಾವಳಿ, ಗಾವಳಿ ಕೇಶವ ಪ್ರಭು, ಹರಿದಾಸ್‌ ಭಟ್‌ ಗಾವಳಿ ಹಾಗೂ ಮುನಿಯಾಲು ಗಣೇಶ್‌ ಶೆಣೈ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next