ಅಹಮದಾಬಾದ್: ಗುಜರಾತ್ ನಲ್ಲಿ ಮುಂದಿನ ಐದು ವರ್ಷಗಳಲ್ಲಿ ಹಸಿರು ಇಂಧನ ಮತ್ತು ಒಪ್ಪಂದದ ಕ್ಷೇತ್ರಗಳಲ್ಲಿ ಸುಮಾರು 2 ಲಕ್ಷ ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡುವ ಯೋಜನೆ ಇದ್ದಿರುವುದಾಗಿ ಅದಾನಿ ಸಮೂಹ ಸಂಸ್ಥೆ ಬುಧವಾರ (ಜನವರಿ 10) ಬಹಿರಂಗಪಡಿಸಿದೆ.
ಇದನ್ನೂ ಓದಿ:Ayodhya Airport:ವಿಮಾನ ನಿಲ್ದಾಣ ಭದ್ರತೆಗೆ ಕೇಂದ್ರದಿಂದ 150 CISF ಕಮಾಂಡೋಸ್ ನಿಯೋಜನೆ
2024ರ ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅದಾನಿ ಗ್ರೂಫ್ ಅಧ್ಯಕ್ಷ ಗೌತಮ್ ಅದಾನಿ ಈ ಘೋಷಣೆ ಮಾಡಿರುವುದಾಗಿ ವರದಿ ತಿಳಿಸಿದೆ.
ಅದಾನಿ ಸಮೂಹದ ಸ್ವಚ್ಛ ಮತ್ತು ಹೆಚ್ಚು ಪರಿಣಾಮಕಾರಿ ಸುಸ್ಥಿರ ಇಂಧನ ಉತ್ಪಾದನೆಯ ಭಾರತದ ಮಹತ್ವಾಕಾಂಕ್ಷಿ ಯೋಜನೆಯ ಪ್ರಮುಖ ಹೂಡಿಕೆ ಕುರಿತ ಇಂಗಿತವನ್ನು ಗೌತಮ್ ಅದಾನಿ ಅವರು ಶೃಂಗದಲ್ಲಿ ವಿವರಿಸಿದರು.
ಆತ್ಮನಿರ್ಭರ್ ಭಾರತ್ ನ ಮುಂದುವರಿದ ಭಾಗವೆಂಬಂತೆ ನಾವು ಹಸಿರು ಇಂಧನ ಸರಬರಾಜು ಉತ್ಪಾದನೆಯನ್ನು ಹೆಚ್ಚಳ ಮಾಡಲಿದ್ದೇವೆ. ಈ ಮೂಲಕ ಮುಂದಿನ ಐದು ವರ್ಷಗಳಲ್ಲಿ ಪರಿಸರ ಸ್ನೇಹಿ ಇಂಧನಕ್ಕೆ ಹೆಚ್ಚು ಒತ್ತು ನೀಡಲಿದ್ದು, ಈ ನಿಟ್ಟಿನಲ್ಲಿ ಅದಾನಿ ಗ್ರೂಪ್ 2 ಲಕ್ಷ ಕೋಟಿಗಿಂತಲೂ ಹೆಚ್ಚು ಹೂಡಿಕೆ ಮಾಡಲಿದೆ ಎಂದು ಅದಾನಿ ಹೇಳಿದರು.
ಬಹುಕೋಟಿ ಹೂಡಿಕೆಯಿಂದಾಗಿ ಗುಜರಾತ್ ನಲ್ಲಿ ಉದ್ಯೋಗಾವಕಾಶ ಲಭಿಸಲಿದೆ. ವಿವಿಧ ಕ್ಷೇತ್ರಗಳಲ್ಲಿನ ಹೂಡಿಕೆಯಿಂದ ಗುಜರಾತ್ ನಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಗೌತಮ್ ಅದಾನಿ ತಿಳಿಸಿದರು.